ADVERTISEMENT

ಪತಂಜಲಿಯ ಆರೋಗ್ಯ ಮತ್ತು ಸ್ವಾಸ್ಥ್ಯ ಸೌಲಭ್ಯಗಳು: ನೈಸರ್ಗಿಕ ಚಿಕಿತ್ಸೆ, ಸಮಗ್ರ ಆರೈಕೆಗೆ ಮಾರ್ಗ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 11:12 IST
Last Updated 23 ಏಪ್ರಿಲ್ 2025, 11:12 IST
<div class="paragraphs"><p>ಪತಂಜಲಿ ನೈಸರ್ಗಿಕ ಉತ್ಪನ್ನಗಳೊಂದಿಗೆ ಸ್ವಾಮಿ ರಾಮದೇವ್. ಸಾಂಪ್ರದಾಯಿಕ ಆಯುರ್ವೇದ ಯೋಗಕ್ಷೇಮದ ಬಗ್ಗೆ ಅವರು ಹೊಂದಿರುವ ಬದ್ಧತೆಯನ್ನು ಈ ಚಿತ್ರ ತೋರುತ್ತದೆ.<br><strong>ಚಿತ್ರ ಕೃಪೆ</strong>: thehansindia</p></div>

ಪತಂಜಲಿ ನೈಸರ್ಗಿಕ ಉತ್ಪನ್ನಗಳೊಂದಿಗೆ ಸ್ವಾಮಿ ರಾಮದೇವ್. ಸಾಂಪ್ರದಾಯಿಕ ಆಯುರ್ವೇದ ಯೋಗಕ್ಷೇಮದ ಬಗ್ಗೆ ಅವರು ಹೊಂದಿರುವ ಬದ್ಧತೆಯನ್ನು ಈ ಚಿತ್ರ ತೋರುತ್ತದೆ.
ಚಿತ್ರ ಕೃಪೆ: thehansindia

   

ಪ್ರಾಕೃತಿಕ ಆರೋಗ್ಯ ಹಾಗೂ ಸ್ವಾಸ್ಥ್ಯಕ್ಕೆ ಸಮಾನಾರ್ಥಕವಾಗಿರುವ ಪತಂಜಲಿಯು, ತನ್ನ ಅತ್ಯಾಧುನಿಕ ಮತ್ತು ಸಮಗ್ರ ವೈದ್ಯಕೀಯ ವಿಧಾನಗಳ ಮೂಲಕ ಆರೋಗ್ಯ ಕ್ಷೇತ್ರವನ್ನೇ ಪರಿವರ್ತಿಸಿದೆ. ಪತಂಜಲಿಯು ತನ್ನ ಆರೋಗ್ಯ ಕೇಂದ್ರಗಳ ಮೂಲಕ ಸಾಂಪ್ರದಾಯಿಕ ಜ್ಞಾನವನ್ನು ಸಮಕಾಲೀನ ವಿಜ್ಞಾನದೊಂದಿಗೆ ಸಂಯೋಜಿಸಿ ಚಿಕಿತ್ಸೆ ಒದಗಿಸುತ್ತಿದೆ. ನಾವು ನಿರೀಕ್ಷಿಸುವ ಆರೋಗ್ಯ ಹಾಗೂ ಚಿಕಿತ್ಸಾ ವಿಧಾನಗಳನ್ನು ಪತಂಜಲಿಯ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು ಹೇಗೆ ಮರು ವ್ಯಾಖ್ಯಾನಿಸುತ್ತಿವೆ ಎಂಬುದನ್ನು ಇಲ್ಲಿ ನೋಡೋಣ.

ಪತಂಜಲಿ ಸ್ವಾಸ್ಥ್ಯ ಕೇಂದ್ರಗಳು ಕೇವಲ ವೈದ್ಯಕೀಯ ಚಿಕಿತ್ಸೆ ದೃಷ್ಟಿಯಿಂದಷ್ಟೇ ಸ್ಥಾಪನೆಯಾಗಿಲ್ಲ; ಅವು ನೈಸರ್ಗಿಕ ಚಿಕಿತ್ಸೆ ಮತ್ತು ಸಮಗ್ರ ಸ್ವಾಸ್ಥ್ಯದಲ್ಲಿಯೂ ಪರಿಣತಿ ಸಾಧಿಸಿವೆ. ಸಮಗ್ರ ಯೋಗಕ್ಷೇಮಕ್ಕೆ ಸಂಬಂಧಿಸಿದ ಪರಿಹಾರಗಳನ್ನು ಒದಗಿಸಲು ಉದ್ದೇಶಿಸಿರುವ ಕೇಂದ್ರಗಳು - ಮನಸ್ಸು, ದೇಹ ಮತ್ತು ಆತ್ಮ ಸಂಬಂಧಿತ ವಿಚಾರಗಳಲ್ಲಿ ನೈಪುಣ್ಯ ಹೊಂದಿವೆ. ಈ ಕೇಂದ್ರಗಳಲ್ಲಿ ವಿಶ್ರಾಂತಿ ಮತ್ತು ಚಿಕಿತ್ಸೆಗೆ ಪೂರಕವಾದ ವಾತಾವರಣವನ್ನು ವಿನ್ಯಾಸಗೊಳಿಸಲಾಗಿದೆ. ಇಲ್ಲಿ, ರೋಗಿಗಳು ಪ್ರಾಕೃತಿಕ ಚಿಕಿತ್ಸಾ ಸಾಮರ್ಥ್ಯಗಳನ್ನು ಅನುಭವಿಸಲು ಸಾಧ್ಯವಾಗುತ್ತದೆ. ಆಯುರ್ವೇದ, ಯೋಗ ಮತ್ತು ಸಾಂಪ್ರದಾಯಿಕ ಚಿಕಿತ್ಸೆ ವಿಧಾನಗಳಿಗೆ ಒತ್ತು ನೀಡುವುದರಿಂದ, ಪರ್ಯಾಯ ಮತ್ತು ನೈಸರ್ಗಿಕ ಮಾರ್ಗಗಳನ್ನು ಎದುರು ನೋಡುತ್ತಿರುವ ರೋಗಿಗಳಿಗೆ ಈ ಕೇಂದ್ರಗಳಲ್ಲಿ ವಿಶೇಷ ಅನುಭವ ಸಿಗಲಿದೆ.

ADVERTISEMENT

ಪತಂಜಲಿ ನಿರಾಯಾಮವು, ಸಂಸ್ಥೆಯ ಅತ್ಯಂತ ಪ್ರಭಾವಶಾಲಿಯಾದ ಚಿಕಿತ್ಸಾ ಕ್ರಮಗಳಲ್ಲಿ ಒಂದು. ದೀರ್ಘ ಸಮಯದಿಂದ ಇರುವ ಕಾಯಿಲೆಗಳ ಚಿಕಿತ್ಸೆವಾಗಿಯೇ ಈ ವಿಧಾನವನ್ನು ರೂಪಿಸಲಾಗಿದೆ. ಇದು ಆಯುರ್ವೇದದ ಚಿಕಿತ್ಸಾ ವಿಧಾನಗಳು ಮತ್ತು ಸಮಕಾಲೀನ ರೋಗನಿರ್ಣಯ ತಂತ್ರಜ್ಞಾನಗಳ ಸಂಯೋಜನೆಯಾಗಿದ್ದು, ರೋಗಿಗಳಿಗೆ ಅವರ ವೈಯಕ್ತಿಕ ಆರೋಗ್ಯದ ಅಗತ್ಯಕ್ಕೆ ತಕ್ಕಂತೆ ಚಿಕಿತ್ಸಾ ಕ್ರಮಗಳನ್ನು ಒದಗಿಸುತ್ತದೆ. ನಿರಾಯಾಮವು ಮಧುಮೇಹದಿಂದ ಹೃದಯ ಸಂಬಂಧಿ ಕಾಯಿಲೆಗಳ ನಿರ್ವಹಣೆವರೆಗೆ ರೋಗದ ಮೂಲವನ್ನು ಪರಿಹರಿಸುವ ಸಮಗ್ರ ವಿಧಾನವಾಗಿದ್ದು, ರೋಗಿಗಳು ದೀರ್ಘಕಾಲದ ಪರಿಹಾರ ಮತ್ತು ಸುಧಾರಿತ ಆರೋಗ್ಯ ಫಲಿತಾಂಶ ಪಡೆಯುವುದನ್ನು ಖಾತ್ರಿಪಡಿಸುತ್ತದೆ. ಆಹಾರಕ್ರಮ, ಜೀವಶೈಲಿಯಲ್ಲಿ ಬದಲಾವಣೆ ಹಾಗೂ ನೈಸರ್ಗಿಕ ಚಿಕಿತ್ಸೆಯ ಮೂಲಕ, ಬಹಳ ಸಮಯದಿಂದ ಇರುವ ಕಾಯಿಲೆಗಳ ನಿರ್ವಹಣಾ ವಿಧಾನದಲ್ಲಿ ನಿರಾಯಾಮವು ಕ್ರಾಂತಿಕಾರಕ ಬದಲಾವಣೆಯನ್ನು ತಂದಿದೆ.

ರೋಗಿಗಳ ಆರೈಕೆ ಮತ್ತು ಪುನರ್ವಸತಿ ವಿಚಾರದಲ್ಲಿ ಹೊಸ ಎತ್ತರವನ್ನು ತಲುಪಿರುವ ಪತಂಜಲಿ ಚಿಕಿತ್ಸಾಲಯವು ಮತ್ತೊಂದು ವಿಶೇಷ ಆರೋಗ್ಯ ಘಟಕವಾಗಿದೆ. ಪತಂಜಲಿ ಚಿಕಿತ್ಸಾಲಯವು ಇತರ ಚಿಕಿತ್ಸಾ ಕೇಂದ್ರಗಳಿಗಿಂತ ಭಿನ್ನವಾಗಿ, ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಆಯುರ್ವೇದ, ಯೋಗ ಮತ್ತು ನೈಸರ್ಗಿಕ ಚಿಕಿತ್ಸಾ ವಿಧಾನಗಳನ್ನು ಸಂಯೋಜಿಸುತ್ತದೆ. ಈ ಘಟಕವು ಕೇವಲ ರೋಗ ಗುಣಪಡಿಸುವುದಷ್ಟೇ ಅಲ್ಲದೆ, ಒಟ್ಟಾರೆ ಯೋಗಕ್ಷೇಮವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ರೋಗ ತಡೆಯ ಮೇಲೆ ಕೇಂದ್ರೀಕೃತವಾಗಿ ವೈಯಕ್ತಿಕ ಚಿಕಿತ್ಸಾ ವಿಧಾನಗಳನ್ನು ಒದಗಿಸುವ ಮೂಲಕ, ಸಂಪೂರ್ಣ ಚೇತರಿಕೆ ಪ್ರಕ್ರಿಯೆಗಳನ್ನು ಈ ಕೇಂದ್ರವು ಅನುಸರಿಸುತ್ತದೆ. ಇಲ್ಲಿ, ದೀರ್ಘಕಾಲೀನ ಯೋಗಕ್ಷೇಮದ ಅಭ್ಯಾಸಗಳನ್ನು ರೂಢಿಸಿಕೊಳ್ಳುತ್ತಿದ್ದಂತೆ ರೋಗಿಗಳಲ್ಲಿ ಆರೋಗ್ಯ ಪುನಃಸ್ಥಾಪನೆ ಸಾಧ್ಯವಾಗುತ್ತದೆ.

ಪ್ರಾಚೀನ ಆಯುರ್ವೇದ ಜ್ಞಾನವನ್ನು ಆಧುನಿಕ ವೈದ್ಯಕೀಯ ವಿಜ್ಞಾನದೊಂದಿಗೆ ಸಂಯೋಜಿಸುವ ಸಾಮರ್ಥ್ಯವು ಪತಂಜಲಿಯ ಚಿಕಿತ್ಸಾ ಕ್ರಮಗಳನ್ನು ವಿಶಿಷ್ಟವನ್ನಾಗಿಸಿದೆ. ಪ್ರಪಂಚದ ಎರಡು ಅತ್ಯುತ್ತಮ ವಿಧಾನಗಳನ್ನು ಬೆಸೆಯುವ ಮೂಲಕ, ಪತಂಜಲಿಯು ಆಧುನಿಕ ಆರೋಗ್ಯ ಸಮಸ್ಯೆಗಳಿಗೆ ಸುರಕ್ಷಿತ ಮತ್ತು ಪರಿಣಾಮಕಾರಿ ಪರಿಹಾರಗಳನ್ನು ಒದಗಿಸುವ ಚಿಕಿತ್ಸಾ ಮಾದರಿಯನ್ನು ರೂಪಿಸಿದೆ. ಕೇವಲ ರೋಗದ ಲಕ್ಷಣಗಳನ್ನು ನಿವಾರಿಸುವ ಬದಲಾಗಿ ಮೂಲ ಕಾರಣಗಳನ್ನು ಪರಿಹರಿಸುವುದಕ್ಕೆ ಅನುಗುಣವಾಗಿ ಚಿಕಿತ್ಸಾ ವಿಧಾನವನ್ನು ವಿನ್ಯಾಸಗೊಳಿಸಲಾಗಿದೆ. ಅದು ಗಿಡಮೂಲಿಕೆ ಚಿಕಿತ್ಸೆಯಾಗಿರಲಿ, ಯೋಗ ಅಥವಾ ಧ್ಯಾನವೇ ಆಗಿರಲಿ, ಪತಂಜಲಿಯ ವಿಧಾನವು ಸಮಕಾಲೀನ ರೋಗನಿರ್ಣಯ ಪರೀಕ್ಷೆಗಳ ಸಹಾಯದಿಂದ ಯಾವುದೇ ರೋಗವನ್ನು ಒಳಗಿನಿಂದಲೇ ಗುಣಪಡಿಸುವ ಉದ್ದೇಶದ ಸುತ್ತಲೇ ಕೆಲಸ ಮಾಡುತ್ತದೆ.

ಪತಂಜಲಿ ನೀಡುವ ನೈಸರ್ಗಿಕ ಚಿಕಿತ್ಸೆಗಳು, ಗಿಡಮೂಲಿಕೆ ಚಿಕಿತ್ಸೆಗಳು, ಪಂಚಕರ್ಮ ಮತ್ತು ಯೋಗವು ಪರಿಣಾಮಕಾರಿ ಪರಿಹಾರಗಳಿಂದಾಗಿ ವ್ಯಾಪಕ ನಂಬಿಕೆ ಗಳಿಸುತ್ತಿವೆ. ಸಂಶ್ಲೇಷಿತ ಔಷಧಗಳ ಅಡ್ಡಪರಿಣಾಮಗಳ ಬಗ್ಗೆ ಜನರು ಹೆಚ್ಚು ಜಾಗೃತರಾಗುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ, ಪತಂಜಲಿಯ ನೈಸರ್ಗಿಕ ಚಿಕಿತ್ಸಾ ವಿಧಾನಗಳು ಸುರಕ್ಷಿತ, ‌ಸೌಮ್ಯ ಮತ್ತು ಸಮಗ್ರ ಪರ್ಯಾಯವನ್ನು ಒದಗಿಸುತ್ತಿವೆ. ಈ ವಿಧಾನಗಳು ದೀರ್ಘಕಾಲೀನ ಆರೋಗ್ಯ, ರೋಗ ತಡೆ ಮತ್ತು ಜನರ ಸಮತೋಲಿತ ಜೀವನಶೈಲಿಗೆ ಒತ್ತು ನೀಡುವುದನ್ನು ರೋಗಿಗಳು ಮೆಚ್ಚುತ್ತಾರೆ. ಯಶೋಗಾಥೆ ಹಾಗೂ ಸಕಾರಾತ್ಮಕ ಫಲಿತಾಂಶಗಳು ಮುಂದುವರಿಯುತ್ತಿರುವುದರಿಂದ, ಪತಂಜಲಿಯ ನೈಸರ್ಗಿಕ ಚಿಕಿತ್ಸಾ ವಿಧಾನಗಳು ನಿಧಾನವಾಗಿ; ಆದರೆ, ಖಂಡಿತವಾಗಿಯೂ ಪರ್ಯಾಯ ಆರೋಗ್ಯ ರಕ್ಷಣಾ ಪರಿಹಾರಗಳನ್ನು ಬಯಸುವ ಹಲವರಿಗೆ ವಿಶ್ವಾಸಾರ್ಹ ಆಯ್ಕೆಯಾಗುತ್ತಿವೆ.

ಪತಂಜಲಿಯ ಆರೋಗ್ಯ ಮತ್ತು ಕ್ಷೇಮ ಸೌಲಭ್ಯಗಳು ಆಧುನಿಕ ಆರೋಗ್ಯ ರಕ್ಷಣೆಯ ಚಿತ್ರಣವನ್ನೇ ಬದಲಾಯಿಸುತ್ತಿವೆ. ಪ್ರಾಚೀನ ಚಿಕಿತ್ಸಾ ಪದ್ಧತಿಗಳು ಮತ್ತು ಆಧುನಿಕ ವೈದ್ಯಕೀಯ ವಿಜ್ಞಾನದ ಪರಿಪೂರ್ಣ ಮಿಶ್ರಣದೊಂದಿಗೆ, ಪತಂಜಲಿಯು ತನ್ನ ರೋಗಿಗಳ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಪೂರೈಸುವ ನೈಸರ್ಗಿಕ, ಪರಿಣಾಮಕಾರಿ ಮತ್ತು ಸಮಗ್ರ ಚಿಕಿತ್ಸೆ ಒದಗಿಸುತ್ತಿದೆ. ನೀವು ದೀರ್ಘಕಾಲದ ಅನಾರೋಗ್ಯಕ್ಕೆ ಪರಿಹಾರ ಹುಡುಕುತ್ತಿದ್ದರೆ ಅಥವಾ ಸಂಪೂರ್ಣ ಯೋಗಕ್ಷೇಮವನ್ನು ಬಯಸುತ್ತಿದ್ದರೆ, ಪತಂಜಲಿಯ ಸೇವೆಗಳು ಆರೋಗ್ಯಕರ ಹಾಗೂ ಹೆಚ್ಚು ಸಮತೋಲನದಿಂದ ಕೂಡಿದ ಜೀವನಕ್ಕೆ ಮಾರ್ಗ ಒದಗಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.