ADVERTISEMENT

Karnataka Budget 2022: ಹೇಗಿದೆ ರಾಜ್ಯದ ಆರ್ಥಿಕ ಪರಿಸ್ಥಿತಿ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಮಾರ್ಚ್ 2022, 10:19 IST
Last Updated 4 ಮಾರ್ಚ್ 2022, 10:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದ ಆರ್ಥಿಕ ಸ್ಥಿತಿ ಹೇಗಿದೆ ಎಂಬುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್‌ನಲ್ಲಿ ಪ್ರಸ್ತಾಪಿಸಿದರು.

ಹಣಕಾಸು ವರ್ಷದ ಆರಂಭದಲ್ಲಿ ಕೋವಿಡ್–19 ಸಾಂಕ್ರಾಮಿಕದಿಂದಾಗಿ ತೆರಿಗೆ ಸಂಗ್ರಹವು ಮಂದಗತಿಯಲ್ಲಿ ಸಾಗಿತ್ತು. ಆದರೆ, ಕ್ರಮೇಣ ಹೆಚ್ಚಾಗಿದ್ದು ಅಂದಾಜು ಮಾಡಿರುವ ಗುರಿಯನ್ನು ನಾವು ತಲುಪಲಿದ್ದೇವೆ ಎಂದು ಅವರು ತಿಳಿಸಿದರು.

ಬಜೆಟ್‌ ಲೈವ್ ಅಪ್‌ಡೇಟ್‌ಗೆ ಕ್ಲಿಕ್ ಮಾಡಿ:

ADVERTISEMENT

2021–22ನೇ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರದ ತೆರಿಗೆ ಸಂಗ್ರಹ ಕೂಡ ಹೆಚ್ಚಾಗಿದೆ. ಹೀಗಾಗಿ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾಗಿರುವ ತೆರಿಗೆ ಪಾಲಿನ ಪರಿಷ್ಕೃತ ಅಂದಾಜನ್ನು ₹24,273 ಕೋಟಿಯಿಂದ ₹27,145 ಕೋಟಿಗೆ ಹೆಚ್ಚಿಸಲಾಗಿದೆ. 2022–23ನೇ ಸಾಲಿನ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಅಂದಾಜು ₹29,783 ಕೋಟಿ ತೆರಿಗೆ ಹಂಚಿಕೆ ಮಾಡುವ ಬಗ್ಗೆ ಉಲ್ಲೇಖಿಸಿತ್ತು ಎಂದು ಅವರು ಹೇಳಿದರು.

ರಾಜ್ಯದ ಆರ್ಥಿಕ ಸ್ಥಿತಿಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿ

* 2022–23ನೇ ಸಾಲಿನ ಬಜೆಟ್ ಗಾತ್ರ ₹2,65,720 ಕೋಟಿ

* 2021–22ನೇ ಸಾಲಿನಲ್ಲಿ ರಾಜ್ಯದ ಸರಕು ಮತ್ತು ಸೇವಾ ತೆರಿಗೆ ಹೆಚ್ಚಳ

* ₹7,158 ಕೋಟಿ – 2021–22ನೇ ಸಾಲಿನಲ್ಲಿ ಕೇಂದ್ರ ನೀಡಿದ ಜಿಎಸ್‌ಟಿ ಪರಿಹಾರ ಮೊತ್ತ

* ₹18,109 ಕೋಟಿ – 2021–22ನೇ ಸಾಲಿನಲ್ಲಿ ಕೇಂದ್ರ ನೀಡಿದ ಜಿಎಸ್‌ಟಿ ಸಾಲ

* ಜಿಎಸ್‌ಟಿ ಪರಿಹಾರವನ್ನು 3 ವರ್ಷಗಳಿಗೆ ವಿಸ್ತರಿಸಲು ಕೇಂದ್ರ ಸರ್ಕಾರಕ್ಕೆ ಮನವಿ

* ವಿತ್ತೀಯ ಕೊರತೆ ಶೇ 3.26ಕ್ಕೆ ಸೀಮಿತ

* 2022–23ನೇ ಸಾಲಿನಲ್ಲಿ ₹72,000 ಕೋಟಿ ಸಾಲ ಪಡೆಯಲು ಚಿಂತನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.