ADVERTISEMENT

Union Budget: ವಿದ್ಯುತ್‌ ಕ್ಷೇತ್ರದ ಪಿಎಸ್‌ಯುಗಳ ಹೂಡಿಕೆ ₹ 51 ಸಾವಿರ ಕೋಟಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2022, 18:58 IST
Last Updated 1 ಫೆಬ್ರುವರಿ 2022, 18:58 IST
   

ನವದೆಹಲಿ: ಸರ್ಕಾರಿ ಸ್ವಾಮ್ಯದ ಎಂಟು ವಿದ್ಯುತ್ ಕಂಪನಿಗಳ ಒಟ್ಟು ಹೂಡಿಕೆಯನ್ನು 2022–2023ನೇ ಆರ್ಥಿಕ ವರ್ಷಕ್ಕೆ ₹ 51,470.14 ಕೋಟಿಗೆ ಹೆಚ್ಚಿಸಲು ಸರ್ಕಾರ ಪ್ರಸ್ತಾಪಿಸಿದೆ.

ಮಂಗಳವಾರ ಸಂಸತ್ತಿನಲ್ಲಿ ಮಂಡಿಸಲಾದ ಬಜೆಟ್ ಪ್ರಕಾರ, ವಿದ್ಯುತ್ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಸಾರ್ವಜನಿಕ ವಲಯದ ಉದ್ಯಮ (ಪಿಎಸ್‌ಯು) ಸತ್ಲುಜ್ ಜಲ ವಿದ್ಯುತ್ ನಿಗಮಕ್ಕೆ 2022-23ರಲ್ಲಿ₹ 8,000 ಕೋಟಿ ಒದಗಿಸಲಾಗಿದೆ.

ಜಲ ವಿದ್ಯುತ್ ಕಂಪನಿಯಾದ ಎನ್‌ಎಚ್‌ಪಿಸಿ ಹೂಡಿಕೆಯನ್ನು 2022-23ಕ್ಕೆ ₹ 7,361.05 ಕೋಟಿಗೆ ಹೆಚ್ಚಿಸಲಾಗಿದೆ.

ADVERTISEMENT

ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಪಿಜಿಸಿಐಎಲ್‌) ಹೂಡಿಕೆಯನ್ನು 2022-23ಕ್ಕೆ ₹ 7,500 ಕೋಟಿನಿಗದಿಪಡಿಸಲಾಗಿದೆ. ದಾಮೋದರ್ ವ್ಯಾಲಿ ಕಾರ್ಪೊರೇಶನ್‌ನ ಹೂಡಿಕೆಯನ್ನು 2022-23ಕ್ಕೆ ₹ 2,009.87 ಕೋಟಿಗೆ ನಿಗದಿಪಡಿಸಲಾಗಿದೆ. 2022–2023ರ ಅವಧಿಗೆ ಎನ್‌ಟಿಪಿಸಿಯ ಹೂಡಿಕೆಯನ್ನು ₹ 22,454 ಕೋಟಿಗೆ ಇಳಿಸಲಾಗಿದೆ.

ಸೌರ ವಿದ್ಯುತ್‌ ಉತ್ಪಾದನೆಗೆ ಆದ್ಯತೆ: ಸೌರ ವಿದ್ಯುತ್‌ ಉತ್ಪಾದನೆಗೆ ಪ್ರಸಕ್ತ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. 10 ವಲಯಗಳಲ್ಲಿ ‘ಸ್ವಚ್ಚ ಇಂಧನ’, ವಿದ್ಯುತ್ ಪ್ರಸರಣ ಮತ್ತು ಆಧುನೀಕರಣಕ್ಕೆ ಒತ್ತು ಕೊಡಲಾಗಿದೆ.

ವಿಶೇಷವಾಗಿ ಹಸಿರು ಇಂಧನ ಮೂಲಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಸುಸ್ಥಿರ ಅಭಿವೃದ್ಧಿಗೆ ಕಡಿಮೆ‌‌ ಇಂಗಾಲ ಬಿಡುಗಡೆ ಮಾಡುವ ಶಕ್ತಿ ಮೂಲಗಳ ಬಳಕೆಗೆ ಒತ್ತು ಕೊಡಲಾಗಿದ್ದು, 2030 ರೊಳಗೆ 280 ಗಿಗಾ ವಾಟ್‌ ವಿದ್ಯುತ್‌ ಉತ್ಪಾದನೆಯ ಗುರಿ ಹೊಂದಲಾಗಿದ್ದು, ಇದಕ್ಕೆ ₹ 19,500 ಕೋಟಿ ಅನುದಾನ ನಿಗದಿ ಮಾಡಲಾಗಿದೆ.‌ ‘ಪಂಚಾಮೃತ’ ಕಲ್ಪನೆಯಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆಗೆ ಒತ್ತು‌ ನೀಡಿದ್ದಾರೆ.

ದೇಶವು ಸುಸ್ಥಿರ ಅಭಿವೃದ್ಧಿ ಪಥದಲ್ಲಿ ಮುನ್ನಡೆದಿದೆ ಎಂದು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದ್ದು, ಅದಕ್ಕೆ ಅನುಗುಣವಾಗಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.

ಇಂಧನ ಉಳಿತಾಯವು ಇಂಧನ ನಿರ್ವಹಣೆಯ ಪ್ರಮುಖ ಅಂಶವಾಗಿದೆ. ಆದ್ದರಿಂದ, ಇಂಧನ ದಕ್ಷತೆ ಮತ್ತು ಉಳಿತಾಯ ಕ್ರಮಗಳಿಗೆ ಉತ್ತೇಜನ ನೀಡಲಾಗುವುದು. ಇಂಧನ ಕ್ಷೇತ್ರದಲ್ಲೂ ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ ನೀಡಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು.

ಇವನ್ನೂ ಓದಿ
*

*
*
*
*
*
*
*
*
*
*
*
*
*
*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.