ADVERTISEMENT

Budget 2025 |ಹೊಸ ಔಷಧಗಳ ಅಭಿವೃದ್ಧಿ ಅಗತ್ಯ: ಆರ್ಥಿಕ ಸಮೀಕ್ಷೆ ವರದಿ

ಪಿಟಿಐ
Published 31 ಜನವರಿ 2025, 9:39 IST
Last Updated 31 ಜನವರಿ 2025, 9:39 IST
<div class="paragraphs"><p>ಆರ್ಥಿಕ ಸಮೀಕ್ಷೆ </p></div>

ಆರ್ಥಿಕ ಸಮೀಕ್ಷೆ

   

ನವದೆಹಲಿ: ಔಷಧ ಕ್ಷೇತ್ರದಲ್ಲಿ ನಾವಿನ್ಯತೆಯೆಡೆಗೆ ಹೆಚ್ಚು ಗಮನ ನೀಡಬೇಕು ಎಂದು ಆರ್ಥಿಕ ಸಮೀಕ್ಷೆಯ ವರದಿ ತಿಳಿಸಿದೆ. ಜತೆಗೆ ಹೊಸ ಔಷಧಗಳ ಅಭಿವೃದ್ಧಿ, ಜೈವಿಕ ಔಷಧಗಳ ಸಂಶೋಧನೆ ಮತ್ತು ಅಭಿವೃದ್ಧಿಗೆ ಖರ್ಚು ಮಾಡುವುದರಲ್ಲಿ ಭಾರತ ಜಾಗತಿಕವಾಗಿ ಇನ್ನೂ ಹಿಂದುಳಿದಿದೆ ಎಂದು ವರದಿ ಹೇಳಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶುಕ್ರವಾರ 2024–25ನೇ ಸಾಲಿನ ಆರ್ಥಿಕ ಸಮೀಕ್ಷೆ ವರದಿಯನ್ನು ಮಂಡಿಸಿದರು.

ADVERTISEMENT

2024ರ ಆರ್ಥಿಕ ವರ್ಷದಲ್ಲಿ ವಾರ್ಷಿಕವಾಗಿ ಔಷಧ ಕ್ಷೇತದಲ್ಲಿ ₹4.17 ಲಕ್ಷ ಕೋಟಿ ವಹಿವಾಟು ನಡೆದಿದೆ. ಕಳೆದ ಐದು ವರ್ಷಗಳಿಂದ ಶೇ 10.1ರಷ್ಟು ಏರಿಕೆ ಕಂಡಿದೆ.

ರಫ್ತು ಒಟ್ಟು ವಹಿವಾಟಿನ 50 ಪ್ರತಿಶತದಷ್ಟಿದೆ, ಹಿಂದಿನ ಆರ್ಥಿಕ ವರ್ಷದಲ್ಲಿ ವಾರ್ಷಿಕ ವಹಿವಾಟಿನ ಮೌಲ್ಯ ₹2.19 ಲಕ್ಷ ಕೋಟಿ ಆಗಿದೆ. ಒಟ್ಟು ಆಮದಿನ ಮೌಲ್ಯ ₹58,440.4 ಕೋಟಿ ಆಗಿದೆ.

ಒಟ್ಟಾರೆ ಔಷಧ ಕ್ಷೇತ್ರದಲ್ಲಿ ನಾವಿನ್ಯತೆಯ ಬಗ್ಗೆ ಹೆಚ್ಚುನ ಗಮನ ಕೊಡುವ ಅಗತ್ಯವಿದ್ದು, ಹೊಸ ಔಷಧಗಳ ಅಭಿವೃದ್ಧಿ ಅಗತ್ಯವಿದೆ ಎಂದು ಆರ್ಥಿಕ ಸಮೀಕ್ಷೆಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.