ADVERTISEMENT

ನವ ಭಾರತ ನಿರ್ಮಾಣಕ್ಕೆ ಐತಿಹಾಸಿಕ ಬಜೆಟ್: ಸಚಿವ ಪ್ರಲ್ಹಾದ ಜೋಶಿ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2022, 11:51 IST
Last Updated 1 ಫೆಬ್ರುವರಿ 2022, 11:51 IST
ಸಚಿವ ಪ್ರಲ್ಹಾದ ಜೋಶಿ
ಸಚಿವ ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: ಕೇಂದ್ರ ವಿತ್ತ ಸಚಿವರು ಮಂಗಳವಾರ ಮಂಡಿಸಿದ ಬಜೆಟ್‌ ಆರೋಗ್ಯ ಹಾಗೂ ಸಮೃದ್ಧ ಭಾರತ ನವನಿರ್ಮಾಣದ ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಬಣ್ಣಿಸಿದ್ದಾರೆ.

ಬಜೆಟ್‌ನಲ್ಲಿ ಆರು ಮುಖ್ಯ ಆಧಾರ ಸ್ಥಂಭಗಳನ್ನು ಪರಿಚಯಿಸಿದ ಅರ್ಥಸಚಿವರು ಇದರ ಒಟ್ಟು ಸಾರವಾಗಿ ಕೋವಿಡ್ ನಂತರದ ಭಾರತ ಮುಂಬರುವ ವರ್ಷಗಳಲ್ಲಿ ಸಮೃದ್ಧವಾಗಿ, ಆತ್ಮ ನಿರ್ಭರ ದೇಶವಾಗಿ ಹೊರ ಹೊಮ್ಮುವುದೆಂಬುದನ್ನು ದೇಶದ ಮುಂದೆ ವಿಸ್ತೃತವಾಗಿ ವಿವರಿಸಿದ್ದಾರೆ ಎಂದಿದ್ದಾರೆ.

ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಈ ಪಾಸ್‌ಪೋರ್ಟ್‌ ಒದಗಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ್ದು ವಿದ್ಯಾರ್ಥಿಗಳಿಗೆ ಹಾಗೂ ಉದ್ಯಮಿಗಳಿಗೆ ಬಾರಿ ಅನುಕೂಲವಾಗಲಿದೆ. ಭಾರತ ಕೃಷಿ ಕಲ್ಯಾಣ, ಗ್ರಾಮಾಭಿವೃದ್ಧಿ ಜೊತೆಯಾಗಿ ನಗರಾಭಿವೃದ್ಧಿ ಆಡಳಿತದ ಎಲ್ಲಾ ವಿಭಾಗದಲ್ಲೂ ತಂತ್ರಜ್ಞಾನದ ರಚನಾತ್ಮಕ ಉಪಯೋಗಕ್ಕೆ ಮುಂದಾಗಿರುವುದು ಸ್ವಾಗರಾರ್ಹ. ಇದು ನವಭಾರತ ಜಾಗತಿಕ ಶಕ್ತಿಯಾಗಿ ಹೊಂದಲು ಪೂರಕವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಬಡವರ ಅಭಿವೃದ್ಧಿ ಬಜೆಟ್‌ನ ಪ್ರಮುಖ ಧ್ಯೇಯವಾಗಿದೆ. ಬಡವರಿಗೆ ಮನೆ, ಶೌಚಾಲಯ, ಗ್ಯಾಸ್ ಸಂಪರ್ಕ, ಇಂಟರ್ನೆಟ್ ಸಂಪರ್ಕ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಒತ್ತು ನೀಡಲಾಗಿದೆ. ಇನ್ನು ಪರ್ವತ ಪ್ರದೇಶಗಳಲ್ಲಿನ ಜನರು ಮೂಲ ಸೌಕರ್ಯಗಳಿಲ್ಲದೇ ಅಲ್ಲಿಂದ ಸ್ಥಳಾಂತರ ಮಾಡಬಾರದು. ಹಿಮಾಲಯ ಉತ್ತರಾಖಂಡ, ಜಮ್ಮು ಕಾಶ್ಮೀರ ಸೇರಿದಂತೆ ಪರ್ವತ ಪ್ರದೇಶಗಳ ರಾಜ್ಯಗಳ ಅಭಿವೃದ್ಧಿಗೆ ಪರ್ವತ ಮಾಲಾ ಯೋಜನೆ ಜಾರಿಗೊಳಿಸಿದ್ದು ಹೆಮ್ಮೆ ಎಂದಿದ್ದಾರೆ.

ಸರ್ಕಾರ ಪ್ರತಿ ರೂಪಾಯಿಯನ್ನೂ ಅರ್ಥಪೂರ್ಣವಾಗಿ ವೆಚ್ಚಮಾಡಿ ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತದ ಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ದಿಟ್ಟ ಹೆಜ್ಜೆ ಇರಿಸಲಾಗಿದೆ. ಜೊತೆಗೆ ದೇಶದ ಬಡಜನರ, ಹಿಂದುಳಿದವರ ಹಾಗೂ ರೈತರ ಕಲ್ಯಾಣಕ್ಕೆ ಕ್ರಮ ವಹಿಸಲಾಗಿದೆ. ಇದು ಸಮಯೋಲನದ ಬಜೆಟ್‌ ಎಂದು ಹೇಳಿದ್ದಾರೆ.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.