ADVERTISEMENT

Union Budget 2025: ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಎಂದರೇನು?

​ಪ್ರಜಾವಾಣಿ ವಾರ್ತೆ
Published 28 ಜನವರಿ 2025, 10:46 IST
Last Updated 28 ಜನವರಿ 2025, 10:46 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: 2025–26ನೇ ಸಾಲಿನ ಕೇಂದ್ರ ಬಜೆಟ್‌ ಫೆ.1 ರಂದು ನಡೆಯಲಿದೆ. ಈ ಬಾರಿ ಮಧ್ಯಮವರ್ಗಕ್ಕೆ ಅನುಕೂಲಕರ ಬಜೆಟ್ ಮಂಡಣೆಯಾಗುವ ಸಾಧ್ಯತೆ ಇದೆ.

ಬಜೆಟ್‌ ಹಿನ್ನೆಲೆ ಹಣಕಾಸಿಗೆ ಸಂಬಂಧಿಸಿದ ವಿಚಾರಗಳನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಅದರಲ್ಲಿ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಕೂಡ ಒಂದು.

ADVERTISEMENT

ಭಾರತ ಸರ್ಕಾರದ ಉಳಿತಾಯದ ಬಾಂಡ್‌ಗಳನ್ನು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಅಥವಾ ಎನ್‌ಎಸ್‌ಸಿ ಎಂದು ಕರೆಯಲಾಗುತ್ತದೆ. 

ಈ ಉಳಿತಾಯ ಪ್ರಮಾಣಪತ್ರಗಳು ಭಾರತದ ಎಲ್ಲಾ ಅಂಚೆಕಚೇರಿಗಳಲ್ಲಿ ದೊರೆಯಲಿದೆ. ಸಣ್ಣ ಉಳಿತಾಯ ಮತ್ತು ಆದಾಯ ತೆರಿಗೆಯ ಪ್ರಯೋಜನ ಪಡೆಯಲು ಹೂಡಿಕೆ ಮಾಡುವ ಎನ್‌ಎಸ್‌ಸಿ ಹೊಂದುವುದು ಉತ್ತಮ ಮಾರ್ಗವಾಗಿದೆ.

18 ವರ್ಷ ಮೇಲ್ಪಟ್ಟವರು, ಟ್ರಸ್ಟ್‌, ಇಬ್ಬರು ವಯಸ್ಕರು ಜಂಟಿಯಾಗಿ ಈ ಉಳಿತಾಯ ಪ್ರಮಾಣಪತ್ರವನ್ನು ಹೊಂದಬಹುದು. 

ಬ್ಯಾಂಕ್‌ಗಳಲ್ಲಿ ಈ ಪ್ರಮಾಣಪತ್ರಗಳನ್ನು ಅಡವಿಟ್ಟು ಸಾಲ ಸೌಲಭ್ಯವನ್ನು ಪಡೆಯಬಹುದು. ಈ ಪ್ರಮಾಣಪತ್ರ ಐದು ವರ್ಷಗಳ ಗರಿಷ್ಠಾವಧಿಯನ್ನು ಹೊಂದಿರುತ್ತದೆ. ಆದಾಯ ತೆರಿಗೆ ಕಾಯ್ದೆ 1961 ಸೆಕ್ಷನ್ 80ಸಿ ಪ್ರಕಾರ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಹೊಂದಿರುವವರು ತೆರಿಗೆ ಪ್ರಯೋಜನಕ್ಕೆ ಅರ್ಹರಾಗಿರುತ್ತಾರೆ ಎನ್ನುತ್ತದೆ ಹಣಕಾಸು ಸಚಿವಾಲಯ.

ಭಾರತ ಸರ್ಕಾರ ನೀಡುವ ಇತರ ಉಳಿತಾಯ ಯೋಜನೆಗಳೆಂದರೆ ಅಂಚೆಕಚೇರಿಯಲ್ಲಿ ನಿಶ್ಚಿತ ಠೇವಣಿ (ಎಫ್‌ಡಿ), ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಆವರ್ತಕ ಠೇವಣಿ (ಆರ್‌ಡಿ) ಇತ್ಯಾದಿ. 1950ರ ಬಳಿಕ ದೇಶದ ಅಭಿವೃದ್ಧಿಗಾಗಿ ಸರ್ಕಾರ ಉಳಿತಾಯ ಪ್ರಮಾಣಪತ್ರಗಳನ್ನು ಹೆಚ್ಚು ಜನಪ್ರಿಯಗೊಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.