ADVERTISEMENT

ಭಾರತದ ಜಿಡಿಪಿ ದರ ತಗ್ಗಿಸಿದ ಏಷ್ಯಾ ಅಭಿವೃದ್ಧಿ ಬ್ಯಾಂಕ್‌

ಪಿಟಿಐ
Published 23 ಜುಲೈ 2025, 15:37 IST
Last Updated 23 ಜುಲೈ 2025, 15:37 IST
ಎಡಿಬಿ
ಎಡಿಬಿ   

ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ಶೇ 6.5ರಷ್ಟಕ್ಕೆ ಇಳಿಯಲಿದೆ ಎಂದು ಏಷ್ಯಾ ಅಭಿವೃದ್ಧಿ ಬ್ಯಾಂಕ್‌ (ಎಡಿಬಿ) ಅಂದಾಜಿಸಿದೆ. 

ಏಪ್ರಿಲ್‌ ತಿಂಗಳಿನ ಅಂದಾಜಿನಲ್ಲಿ, ಬೆಳವಣಿಗೆ ದರವು ಶೇ 6.7ರಷ್ಟು ಇರಲಿದೆ ಎಂದು ಎಡಿಬಿ ಹೇಳಿತ್ತು. ಆದರೆ, ಈಗ ಬೆಳವಣಿಗೆ ದರವನ್ನು ಪರಿಷ್ಕರಿಸಿದೆ.

ಅಮೆರಿಕದ ಸುಂಕ ನೀತಿ ಮತ್ತು ವ್ಯಾಪಾರ ವಹಿವಾಟಿನಲ್ಲಿನ ಅನಿಶ್ಚಿತತೆಯು ದೇಶದ ರಫ್ತು ಮತ್ತು ಹೂಡಿಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇದು ಬೆಳವಣಿಗೆ ದರದ ಪರಿಷ್ಕರಣೆಗೆ ಕಾರಣವಾಗಿದೆ ಎಂದು ಹೇಳಿದೆ. ಜೊತೆಗೆ ಭಾರತವು ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುವ ಆರ್ಥಿಕತೆಯಾಗಿ ಉಳಿದಿದೆ ಎಂದು ತಿಳಿಸಿದೆ.

2026–27ರ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆಯು ಶೇ 6.7ರಷ್ಟಾಗಬಹುದು ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.