ADVERTISEMENT

ಮೈಸೂರು, ಮಂಗಳೂರಿನಲ್ಲಿ ಏರ್‌ಟೆಲ್‌ನ ನೆಕ್ಸ್ಟ್-ಜೆನ್‌ ಮಳಿಗೆ ಆರಂಭ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 10:50 IST
Last Updated 29 ಫೆಬ್ರುವರಿ 2024, 10:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ದೇಶದ ಪ್ರಮುಖ ದೂರಸಂಪರ್ಕ ಕಂಪನಿಯಾದ ಭಾರ್ತಿ ಏರ್‌ಟೆಲ್, ಮೈಸೂರು ಮತ್ತು ಮಂಗಳೂರಿನಲ್ಲಿ ಚಿಲ್ಲರೆ ವಹಿವಾಟು ಹೆಚ್ಚಳದ ಜೊತೆಗೆ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ನೆಕ್ಸ್ಟ್-ಜೆನ್ ಕಂಪನಿ ಮಾಲೀಕತ್ವದ ಮಳಿಗೆಗಳನ್ನು ಪ್ರಾರಂಭಿಸಿದೆ.

ಮೈಸೂರಿನ ಜೆ.ಪಿ. ನಗರ, ಬೋಗಾದಿ, ಎನ್‌.ಆರ್. ಮೊಹಲ್ಲಾ ಮತ್ತು ಸಿದ್ಧಾರ್ಥ ನಗರ ಹಾಗೂ ಮಂಗಳೂರಿನ ಕೊಟ್ಟಾರ ಮತ್ತು ಫಾದರ್ ಮುಲ್ಲರ್ ರಸ್ತೆಯಲ್ಲಿ ಈ ಹೊಸ ಮಳಿಗೆಗಳು ಕಾರ್ಯಾರಂಭ ಮಾಡಿವೆ.

ಏರ್‌ಟೆಲ್‌ನ ಚಿಲ್ಲರೆ ಅಸ್ತಿತ್ವವನ್ನು ಬಲಪಡಿಸುವುದೇ ಈ ಮಳಿಗೆಗಳ ಉದ್ದೇಶವಾಗಿದೆ. ಇವು ಗ್ರಾಹಕರಿಗೆ ಸಾಟಿಯಿಲ್ಲದ ಸೇವಾ ಅನುಭವ ನೀಡುತ್ತವೆ. ಏರ್‌ಟೆಲ್‌ನ ಅತ್ಯಾಧುನಿಕ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡುತ್ತವೆ ಎಂದು ಕಂಪನಿ ತಿಳಿಸಿದೆ.

ADVERTISEMENT

ಈ ಮಳಿಗೆಗಳಲ್ಲಿ ಎಕ್ಸ್‌ಸ್ಟ್ರೀಮ್, ಎಕ್ಸ್‌ಸೇಫ್, 5ಜಿ ಪ್ಲಸ್ ಸೇರಿದಂತೆ ಏರ್‌ಟೆಲ್‌ನ ಸಂಪೂರ್ಣ ಶ್ರೇಣಿಯ ಕೊಡುಗೆಗಳ ಬಗ್ಗೆ ಮಾಹಿತಿ ದೊರೆಯಲಿದೆ. ಇಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ‘ಏರ್‌ಟೆಲ್‌ ಸ್ನೇಹಿತರು’ ಎಂದು ಕರೆಯಲಾಗುತ್ತದೆ. ಮೊಬೈಲ್, ಬ್ರಾಡ್‌ಬ್ಯಾಂಡ್ ಮತ್ತು ಡಿಟಿಎಚ್‌ ಸೇವೆ ಸೇರಿದಂತೆ ಏರ್‌ಟೆಲ್‌ನ ಎಲ್ಲಾ ಸೇವೆಗಳ ಬಗ್ಗೆ ಗ್ರಾಹಕರು ಕೇಳುವ ಪ್ರಶ್ನೆಗಳಿಗೆ ಸಿಬ್ಬಂದಿ ಉತ್ತರಿಸಲಿದ್ದಾರೆ. ಈ ಕುರಿತು ಅವರಿಗೆ ಸೂಕ್ತ ತರಬೇತಿಯನ್ನೂ ನೀಡಲಾಗಿದೆ ಎಂದು ತಿಳಿಸಿದೆ.

‘ಕರ್ನಾಟಕದಲ್ಲಿ ಕಂಪನಿಯ ಚಿಲ್ಲರೆ ವಹಿವಾಟು ವಿಸ್ತರಣೆಗೆ ಒತ್ತು ನೀಡಲು ಈ ಮಳಿಗೆಗಳನ್ನು ತೆರೆಯಲಾಗಿದೆ. ಗ್ರಾಹಕರ ಅಗತ್ಯತೆ ಪೂರೈಸುವುದೇ ಇದರ ಉದ್ದೇಶವಾಗಿದೆ. ಮೊಬೈಲ್, ಬ್ರಾಡ್‌ಬ್ಯಾಂಡ್, ಡಿಟಿಎಚ್‌ ಇತ್ಯಾದಿ ಸೇರಿದಂತೆ ಸಮಗ್ರ ಸೇವೆ ನೀಡುತ್ತವೆ’ ಎಂದು ಕರ್ನಾಟಕದ ಭಾರ್ತಿ ಏರ್‌ಟೆಲ್‌ನ ಸಿಇಒ ವಿವೇಕ್ ಮೆಹೆಂದಿರಟ್ಟಾ ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.