ಆರ್‌ಬಿಐ
ಮುಂಬೈ: ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಒಟ್ಟು ಅನುತ್ಪಾದಕ ಸಾಲಗಳ (ಎನ್‌ಪಿಎ) ಪ್ರಮಾಣವು ಮಾರ್ಚ್ ವೇಳೆಗೆ ಶೇಕಡ 2.3ರಷ್ಟಕ್ಕೆ ತಗ್ಗಿದೆ ಎಂದು 46 ಬ್ಯಾಂಕ್‌ಗಳ ವಹಿವಾಟು ಪರಿಶೀಲಿಸಿ, ಹಣಕಾಸು ಸ್ಥಿರತೆ ವರದಿಯಲ್ಲಿ ಆರ್‌ಬಿಐ ಹೇಳಿದೆ.
ಒಟ್ಟು ಎನ್‌ಪಿಎ ಪ್ರಮಾಣವು 2024ರ ಸೆಪ್ಟೆಂಬರ್‌ನಲ್ಲಿ ಶೇ 2.6ರಷ್ಟು ಇತ್ತು. ಆದರೆ, 2027ರ ಮಾರ್ಚ್ ವೇಳೆಗೆ, 46 ಬ್ಯಾಂಕ್‌ಗಳ ಒಟ್ಟು ಎನ್‌ಪಿಎ ಪ್ರಮಾಣವು ಶೇ 2.6ಕ್ಕೆ ಹೆಚ್ಚಳ ಆಗಬಹುದು ಎಂದು ಆರ್‌ಬಿಐ ಅಂದಾಜು ಮಾಡಿದೆ.
ಹಿಂದಿನ ದಶಕದ ಹೆಚ್ಚಿನ ಅವಧಿಗೆ ಎನ್‌ಪಿಎ ಸಮಸ್ಯೆಯು ದೇಶದ ಬ್ಯಾಂಕಿಂಗ್ ವಲಯವನ್ನು ಕಾಡಿತ್ತು. ನಂತರದ ದಿನಗಳಲ್ಲಿ ಪರಿಸ್ಥಿತಿ ಸುಧಾರಣೆ ಕಂಡಿದೆ.
ಒಟ್ಟು ‘ಎನ್‌ಪಿಎ’ಯಲ್ಲಿ ಕೃಷಿ ವಲಯದ ಪಾಲು ಅತಿಹೆಚ್ಚು. ಇದು ಶೇ 6.1ರಷ್ಟಿದೆ. ವೈಯಕ್ತಿಕ ಸಾಲಗಳಲ್ಲಿ ಎನ್‌ಪಿಎ ಪ್ರಮಾಣವು ಶೇ 1.2ರಷ್ಟು ಇದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್ ವಹಿವಾಟಿನಲ್ಲಿ ಎನ್‌ಪಿಎ ಪ್ರಮಾಣ ಶೇ 14.3ರಷ್ಟು ಆಗಿದೆ. ಇದು ಖಾಸಗಿ ಬ್ಯಾಂಕ್‌ಗಳಲ್ಲಿ ಶೇ 2.1ರಷ್ಟು ಮಾತ್ರವೇ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.