ಡೀಸೆಲ್ ದರ ಹೆಚ್ಚಳ
ಬೆಂಗಳೂರು: ರಾಜ್ಯದಲ್ಲಿ ಡೀಸೆಲ್ ದರ ಪ್ರತಿ ಲೀಟರ್‌ಗೆ ₹2ರಷ್ಟು ಏರಿಕೆಯಾಗಿರುವುದರಿಂದ ಕೃಷಿ ಹಾಗೂ ಉದ್ಯಮ ಕ್ಷೇತ್ರಗಳ ಮೇಲೆ ಪರಿಣಾಮ ಬೀರಲಿದೆ.
ರಾಜ್ಯ ಸರ್ಕಾರವು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ 18.44ರಿಂದ ಶೇ 21.77ಕ್ಕೆ ಏರಿಕೆ ಮಾಡಿದೆ. ಬೆಂಗಳೂರಿನಲ್ಲಿ ₹89.02 ಇದ್ದ ಡೀಸೆಲ್ ಬೆಲೆ ₹91.02 ಆಗಲಿದೆ. ಉಳಿದ ಜಿಲ್ಲೆಗಳಲ್ಲಿ ಈಗಿರುವ ದರಕ್ಕೆ ಅನುಗುಣವಾಗಿ ಶೇಕಡಾ 2.73ರಷ್ಟು ಹೆಚ್ಚಳವಾಗಲಿದೆ.
ಈಗ ತೆರಿಗೆ ದರ ಏರಿಕೆಯ ನಂತರ ಮಾರಾಟ ಬೆಲೆ ಹೆಚ್ಚಳವಾಗಿರುವುದರಿಂದ ಕೃಷಿ ಹಾಗೂ ಉದ್ಯಮ ಕ್ಷೇತ್ರಗಳಿಗೆ ಒಡೆತ ಬಿದಿದ್ದೆ.
ಯಾವುದರ ಮೇಲೆಲ್ಲಾ ಪ್ರಭಾವ
ಕೃಷಿ ಹಾಗೂ ಬಹುತೇಕ ಉದ್ಯಮಗಳು ಡೀಸೆಲ್ ಅನ್ನೇ ಅವಲಂಬಿಸಿದ್ದು, ದರ ಏರಿಕೆಯೂ ಎಲ್ಲ ಕ್ಷೇತ್ರಗಳ ಮೇಲೂ ಪರಿಣಾಮ ಬೀರಲಿದೆ. ಮುಂದಿನ ದಿನಗಳಲ್ಲಿ ಎಲ್ಲ ವಲಯಗಳ ದರ ಹೆಚ್ಚಳವಾಗಲು ಇದು ಕಾರಣವಾಗಬಹುದು.
ಯಾವ ವಲಯಗಳು
l ಸರಕು ಸಾಗಣೆ (ಟ್ರಕ್‌ಗಳು) ಮತ್ತು ಸಾರಿಗೆ (ಬಸ್‌ಗಳು, ಆಟೊಗಳು), ಡೀಸೆಲ್ ಕಾರುಗಳು
l ಕೃಷಿ ಚಟುವಟಿಕೆ (ಟ್ರ್ಯಾಕ್ಟರ್ ಚಟುವಟಿಕೆಗಳು, ನೀರಿನ ಟ್ಯಾಂಕರ್‌ಗಳು...), ಕೃಷಿ ಉತ್ಪನ್ನಗಳ ಸಾಗಣೆ
l ಡೀಸೆಲ್ ಜನರೇಟರ್ ಅವಲಂಬಿತ ಕೈಗಾರಿಕೆ, ಉದ್ಯಮ ಮತ್ತು ಸೇವೆಗಳು
l ಕಟ್ಟಡ ನಿರ್ಮಾಣ ಕಾಮಗಾರಿ
l ಅರ್ಥ್‌ಮೂವಿಂಗ್, ಕೊಳವೆಬಾವಿ, ರಸ್ತೆ ನಿರ್ಮಾಣ ಕಾಮಗಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.