
ಬೆಂಗಳೂರು: ಇಂಟರ್‌ನ್ಯಾಷನಲ್ ಫೆಡರೇಷನ್ ಆಫ್ ಇನ್ವೆಂಟರ್ಸ್ ಅಸೋಸಿಯೇಷನ್ಸ್‌ನ (ಐಎಫ್‌ಐಎ) ಭಾರತ ವಿಭಾಗದ ಸಲಹಾ ಮಂಡಳಿಯ ಸದಸ್ಯರಾಗಿ ಉದ್ಯಮಿ ಸಂಜಯ್ ಕೊಪ್ಪಿಕರ್ ನೇಮಕವಾಗಿದ್ದಾರೆ.
ಈ ನೇಮಕಾತಿಯು ದೇಶದ ಗ್ರಾಮೀಣ ಭಾಗದ ನವೋದ್ಯಮಿಗಳು, ಸಂಶೋಧಕರು, ನೀತಿನಿರೂಪಕರು ಮತ್ತು ಜಾಗತಿಕ ನವೋದ್ಯಮ ವೇದಿಕೆಗಳ ನಡುವಿನ ಪಾಲುದಾರಿಕೆಯನ್ನು ಇನ್ನಷ್ಟು ಸದೃಢಗೊಳಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.
‘ಐಎಫ್‌ಐಎ ಭಾರತ್ ಸಂಘಟನೆಯ ಜೊತೆಗೂಡಿ ನವೋದ್ಯಮಿಗಳಿಗೆ ಜಾಗತಿಕ ಅವಕಾಶವನ್ನು ಸೃಷ್ಟಿಸುವ ಮತ್ತು ನವೋದ್ಯಮಿಗಳ ಸಬಲೀಕರಣಕ್ಕೆ ಪೂರಕವಾದ ವಾತಾವರಣ ನಿರ್ಮಿಸಲು ಉತ್ಸುಕನಾಗಿದ್ದೇನೆ’ ಎಂದು ಸಂಜಯ್ ಕೊಪ್ಪಿಕರ್ ತಿಳಿಸಿದ್ದಾರೆ.
ಸಂಜಯ್ ಕೊಪ್ಪಿಕರ್ ಅವರು ಜಾಗತಿಕ ಏಜೆಂಟಿಕ್ ಆಟೊಮೇಷನ್ ಸಂಸ್ಥೆ ಇವೊಲ್ಯೂಟ್‌ಐಕ್ಯೂ ಮತ್ತು ತಂತ್ರಜ್ಞಾನ ಸಲಹಾ ಸಂಸ್ಥೆ ಕ್ವಾಡ್‌ವೇವ್‌ನ ಸಹಸ್ಥಾಪಕರು. ಅಲ್ಲದೆ, ಬೆಂಗಳೂರಿನಲ್ಲಿ ಮಿಲಿಯನ್ ಮ್ಯುಟಿನೀಸ್ ಸ್ವಯಂಸೇವಾ ಸಂಸ್ಥೆಯನ್ನೂ ನಡೆಸುತ್ತಿದ್ದಾರೆ. ಇದರ ಮೂಲಕ ಗ್ರಾಮೀಣ ಭಾಗದ ಉದ್ಯಮಿಗಳು ಮತ್ತು ನವೋದ್ಯಮಿಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.