ADVERTISEMENT

ಇನ್ನಷ್ಟು ಉತ್ತೇಜಕ ಕೊಡುಗೆ: ಡಿಬಿಎಸ್‌

ಪಿಟಿಐ
Published 26 ಆಗಸ್ಟ್ 2019, 20:15 IST
Last Updated 26 ಆಗಸ್ಟ್ 2019, 20:15 IST
   

ಸಿಂಗಪುರ: ಮುಂದಿನ 15 ದಿನಗಳಲ್ಲಿ ಕೇಂದ್ರ ಸರ್ಕಾರ ಇನ್ನೂ ಎರಡು ಹಂತದಲ್ಲಿ ಉತ್ತೇಜಕ ಕ್ರಮಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ ಎಂದು ಡೆವಲಪ್‌ಮೆಂಟ್‌ ಬ್ಯಾಂಕ್‌ ಆಫ್‌ ಸಿಂಗಪುರ (ಡಿಬಿಎಸ್‌ ಬ್ಯಾಂಕ್‌) ಹೇಳಿದೆ.

ಸರ್ಕಾರ ಪ್ರಕಟಿಸಿರುವ ಸುಧಾರಣಾ ಕ್ರಮಗಳನ್ನು ಗಮನಿಸಿದರೆ, ಹೊಂದಾಣಿಕೆಯ ಹಣಕಾಸು ನೀತಿಯ ಜತೆಗೆ ಈಗಾಗಲೇ ಪ್ರಕಟಿಸಿರುವ ಕ್ರಮಗಳನ್ನು ಇನ್ನಷ್ಟು ವ್ಯವಸ್ಥಿತಗೊಳಿಸುವುದಕ್ಕೆ ಗಮನ ನೀಡಲಿದೆ. ಒಟ್ಟಾರೆಯಾಗಿ, ಸಮಗ್ರವಾದ ಆರ್ಥಿಕ ಉತ್ತೇಜನ ಕೊಡುಗೆ ಪ್ರಕಟವಾಗಲಿದೆ ಎಂದು ವಿಶ್ಲೇಷಣೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT