ADVERTISEMENT

ಎಫ್‌ಪಿಐ: ಮೇನಲ್ಲಿ ₹19 ಸಾವಿರ ಕೋಟಿ ಹೂಡಿಕೆ

ಪಿಟಿಐ
Published 1 ಜೂನ್ 2025, 13:25 IST
Last Updated 1 ಜೂನ್ 2025, 13:25 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ನವದೆಹಲಿ: ವಿದೇಶಿ ಹೂಡಿಕೆದಾರರು ದೇಶದ ಷೇರುಪೇಟೆಯಲ್ಲಿ ಮೇ ತಿಂಗಳಲ್ಲಿ ಒಟ್ಟು ₹19,860 ಕೋಟಿ ಹೂಡಿಕೆ ಮಾಡಿದ್ದಾರೆ.

ದೇಶದ ಆರ್ಥಿಕತೆಯ ಮೂಲಭೂತ ಅಂಶಗಳು ಚೆನ್ನಾಗಿರುವುದು, ಜಾಗತಿಕ ಅರ್ಥ ವ್ಯವಸ್ಥೆಯ ಆರೋಗ್ಯದ ಸೂಚಕಗಳು ಪೂರಕವಾಗಿ ಇರುವುದು ಇದಕ್ಕೆ ಕಾರಣ ಎಂದು ತಜ್ಞರು ಹೇಳಿದ್ದಾರೆ.

ADVERTISEMENT

ವಿದೇಶಿ ಹೂಡಿಕೆದಾರರು ಏಪ್ರಿಲ್‌ ತಿಂಗಳಲ್ಲಿ ₹4,223 ಕೋಟಿ ಹಣ ತೊಡಗಿಸಿದ್ದರು. ಇದಕ್ಕೂ ಮೊದಲು ಅವರು ಮಾರ್ಚ್‌ನಲ್ಲಿ ₹3,973 ಕೋಟಿ, ಫೆಬ್ರುವರಿಯಲ್ಲಿ ₹34,574 ಕೋಟಿ ಹಾಗೂ ಜನವರಿಯಲ್ಲಿ ₹78,027 ಕೋಟಿ ಹಿಂಪಡೆದಿದ್ದರು.

ವಿದೇಶಿ ಹೂಡಿಕೆದಾರರು ಮುಂದಿನ ದಿನಗಳಲ್ಲಿಯೂ ಭಾರತದಲ್ಲಿ ಹಣ ತೊಡಗಿಸುವುದನ್ನು ಮುಂದುವರಿಸುವ ಸಾಧ್ಯತೆ ಇದೆ. ಆದರೆ, ಮಾರುಕಟ್ಟೆ ಸೂಚ್ಯಂಕಗಳು ಹೆಚ್ಚಿನ ಮಟ್ಟವನ್ನು ತಲುಪಿದಂತೆಲ್ಲ ಅವರು ಒಂದಿಷ್ಟು ಷೇರುಗಳ ಮಾರಾಟಕ್ಕೆ ಮುಂದಾಗಬಹುದು ಎಂದು ಜಿಯೋಜಿತ್‌ ಇನ್ವೆಸ್ಟ್‌ಮೆಂಟ್ಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.