ನವದೆಹಲಿ: ದೇಶದ ಆರ್ಥಿಕತೆಯು ಚೇತರಿಕೆಯ ಹಳಿಗೆ ಮರಳಿರುವುದು ವಿದೇಶಿ ಬಂಡವಾಳ ಹೂಡಿಕೆದಾರರಲ್ಲಿ (ಎಫ್‌ಪಿಐ) ವಿಶ್ವಾಸ ಹೆಚ್ಚಿಸಿದೆ. ಹಾಗಾಗಿ, ಏಪ್ರಿಲ್ 15ರಿಂದ 17ರ ವರೆಗೆ ದೇಶದ ಈಕ್ವಿಟಿ ಮಾರುಕಟ್ಟೆಯಲ್ಲಿ ₹8,500 ಕೋಟಿ ಹೂಡಿಕೆ ಮಾಡಿದ್ದಾರೆ.
ಪ್ರಸಕ್ತ ತಿಂಗಳ ಮೊದಲ ಎರಡು ವಾರಗಳಲ್ಲಿ ₹23,103 ಕೋಟಿ ಬಂಡವಾಳವನ್ನು ಹಿಂಪಡೆದಿದ್ದರು. ಜನವರಿ ಆರಂಭದಿಂದ ಇಲ್ಲಿಯವರೆಗೆ ಒಟ್ಟು ₹1.4 ಲಕ್ಷ ಕೋಟಿ ಬಂಡವಾಳ ಹಿಂಪಡೆದಿದ್ದಾರೆ.
‘ಅಮೆರಿಕದ ವ್ಯಾಪಾರ ನೀತಿಯು ಸ್ಥಿರತೆ ಕಾಯ್ದುಕೊಳ್ಳುತ್ತಿದೆ. ದೇಶೀಯ ಷೇರುಪೇಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆದಿದೆ. ಈ ಬೆಳವಣಿಗೆಯು ವಿದೇಶಿ ಬಂಡವಾಳದ ಒಳಹರಿವು ಏರಿಕೆಗೆ ಕಾರಣವಾಗಿದೆ’ ಎಂದು ಮಾರ್ನಿಂಗ್‌ಸ್ಟಾರ್ ಇನ್ವೆಸ್ಟ್‌ಮೆಂಟ್ ರಿಸರ್ವ್ ಇಂಡಿಯಾದ ವ್ಯವಸ್ಥಾಪಕ (ಸಂಶೋಧನೆ) ಹಿಮಾಂಶು ಶ್ರೀವಾಸ್ತವ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.