ADVERTISEMENT

ಜಿಡಿಪಿ ಬೆಳವಣಿಗೆ ಅಂದಾಜು ಪರಿಷ್ಕರಿಸಿದ ಫಿಚ್

ಜಿಡಿಪಿ ಬೆಳವಣಿಗೆ ಅಂದಾಜು ಪರಿಷ್ಕರಿಸಿದ ಫಿಚ್

ಪಿಟಿಐ
Published 4 ಡಿಸೆಂಬರ್ 2025, 13:35 IST
Last Updated 4 ಡಿಸೆಂಬರ್ 2025, 13:35 IST
ಜಿಡಿಪಿ
ಜಿಡಿಪಿ   

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಅರ್ಥ ವ್ಯವಸ್ಥೆಯ ಬೆಳವಣಿಗೆ ದರವು ಶೇ 7.4ರಷ್ಟು ಆಗಬಹುದು ಎಂದು ಫಿಚ್ ರೇಟಿಂಗ್ಸ್ ಸಂಸ್ಥೆಯು ಅಂದಾಜನ್ನು ಹೆಚ್ಚಿಸಿದೆ.

ಜಿಎಸ್‌ಟಿ ದರ ಪರಿಷ್ಕರಣೆಯ ಪರಿಣಾಮವಾಗಿ ಗ್ರಾಹಕರು ಹೆಚ್ಚು ವೆಚ್ಚ ಮಾಡುತ್ತಿರುವುದು ಮುನ್ನೋಟದ ಪರಿಷ್ಕರಣೆಗೆ ಒಂದು ಕಾರಣ. ಫಿಚ್ ಸಂಸ್ಥೆಯು ಈ ಮೊದಲು ಜಿಡಿಪಿ ಬೆಳವಣಿಗೆ ದರವು ಶೇ 6.9ರಷ್ಟು ಇರಲಿದೆ ಎಂದು ಅಂದಾಜಿಸಿತ್ತು.

ಹಣದುಬ್ಬರ ಕಡಿಮೆ ಆಗುತ್ತಿರುವ ಕಾರಣದಿಂದಾಗಿ ಆರ್‌ಬಿಐಗೆ ರೆಪೊ ದರವನ್ನು ಡಿಸೆಂಬರ್‌ನಲ್ಲಿ ಇನ್ನಷ್ಟು ತಗ್ಗಿಸಲು ಅವಕಾಶ ಇದೆ ಎಂದು ಫಿಚ್ ಹೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.