ADVERTISEMENT

ಚಿನ್ನ, ಬೆಳ್ಳಿ ದರ ಏರಿಕೆ: ಇಲ್ಲಿದೆ ವಿವರ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 16:04 IST
Last Updated 11 ಡಿಸೆಂಬರ್ 2025, 16:04 IST
   

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಗುರುವಾರ ನಡೆದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯಲ್ಲಿ ಏರಿಕೆಯಾಗಿದೆ.

ಬೆಳ್ಳಿ ಧಾರಣೆ ಕೆ.ಜಿಗೆ ₹2,400 ಹೆಚ್ಚಳವಾಗಿ, ₹1,94,400ರಂತೆ ಮಾರಾಟವಾಗಿದೆ. 

ಬುಧವಾರದ ವಹಿವಾಟಿನಲ್ಲಿ ಬೆಳ್ಳಿ ಧಾರಣೆ ಒಂದೇ ದಿನ ₹11,500 ಏರಿಕೆಯಾಗಿ, ಕೆ.ಜಿ ಬೆಳ್ಳಿ ₹1.92 ಲಕ್ಷವಾಗಿತ್ತು.

ADVERTISEMENT

10 ಗ್ರಾಂ ಚಿನ್ನದ (ಶೇ 99.9ರಷ್ಟು ಪರಿಶುದ್ಧತೆ) ದರವು ₹90 ಹೆಚ್ಚಳವಾಗಿ, ₹1,32,490ಕ್ಕೆ ತಲುಪಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ. 

ಭೌತಿಕ ರೂಪದಲ್ಲಿರುವ ಬೆಳ್ಳಿಗೆ ಹೆಚ್ಚಿದ ಬೇಡಿಕೆ, ಪೂರೈಕೆಯಲ್ಲಿನ ಕೊರತೆ, ರೂಪಾಯಿ ಮೌಲ್ಯ ಇಳಿಕೆ ಮತ್ತು ಹೂಡಿಕೆದಾರರು ಬೆಳ್ಳಿಯಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಮುಂದಾಗಿದ್ದರಿಂದ ಬೆಳ್ಳಿ ಧಾರಣೆ ಏರಿಕೆ ಕಂಡಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.