ADVERTISEMENT

ದತ್ತಾಂಶ–ಎ.ಐ ಲ್ಯಾಬ್‌ ತೆರೆಯಲು ನಿರ್ಧಾರ: ಸಂಸತ್‌ಗೆ ಕೇಂದ್ರ ಸರ್ಕಾರ

ಪಿಟಿಐ
Published 20 ಡಿಸೆಂಬರ್ 2024, 14:07 IST
Last Updated 20 ಡಿಸೆಂಬರ್ 2024, 14:07 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದ ಟೈರ್‌ 2 ಮತ್ತು ಟೈರ್‌ 3 ನಗರಗಳಲ್ಲಿ ದತ್ತಾಂಶ ಮತ್ತು ಕೃತಕ ಬುದ್ಧಿಮತ್ತೆ (ಎ.ಐ) ಲ್ಯಾಬ್‌ ತೆರೆಯಲು ನಿರ್ಧರಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಪ್ರಸ್ತಾವಗಳನ್ನು ಆಹ್ವಾನಿಸಲಾಗಿದೆ ಎಂದು ಕೇಂದ್ರ ಸರ್ಕಾರವು, ಶುಕ್ರವಾರ ಸಂಸತ್‌ಗೆ ತಿಳಿಸಿದೆ.

ಇಂಡಿಯಾ ಎ.ಐ ಮಿಷನ್ ಮೂಲಕ ರಾಷ್ಟ್ರೀಯ ಎಲೆಕ್ಟ್ರಾನಿಕ್ಸ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಸಹಭಾಗಿತ್ವದಡಿ 27 ಲ್ಯಾಬ್‌ಗಳನ್ನು ತೆರೆಯಲಾಗುವುದು ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐ.ಟಿ ಖಾತೆಯ ರಾಜ್ಯ ಸಚಿವ ಜಿತಿನ್ ಪ್ರಸಾದ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ನಗರಗಳ ವ್ಯಾಪ್ತಿಯಲ್ಲಿರುವ ಪ್ರಮುಖ ಕೈಗಾರಿಕಾ ತರಬೇತಿ ಕೇಂದ್ರ/ ಪಾಲಿಟೆಕ್ನಿಕ್‌ಗಳ ಪಟ್ಟಿ ಸಲ್ಲಿಸುವಂತೆ ಕೋರಲಾಗಿದೆ ಎಂದು ಹೇಳಿದ್ದಾರೆ.

ADVERTISEMENT

ಕೌಶಲಾಭಿವೃದ್ಧಿ ದೃಷ್ಟಿಯಿಂದ ಇಂಡಿಯಾ ಎ.ಐ ಮಿಷನ್‌ನಡಿ ಈ ದತ್ತಾಂಶ ಮತ್ತು ಎ.ಐ ಲ್ಯಾಬ್‌ ತೆರೆಯಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯಿಂದ ಅನುಮೋದಿತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಓದುತ್ತಿರುವ 400 ಬಿ.ಟೆಕ್‌ ಮತ್ತು 500 ಎಂ.ಟೆಕ್‌ ವಿದ್ಯಾರ್ಥಿಗಳಿಗೆ ಇಂಡಿಯಾ ಎ.ಐ ಫೆಲೋಶಿಪ್‌ ನೀಡಲಾಗುತ್ತಿದೆ ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.