ADVERTISEMENT

New GST Rates List: ಎರಡು ಹಂತದ ತೆರಿಗೆ; ಯಾವುದು ಅಗ್ಗ?

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 2:16 IST
Last Updated 4 ಸೆಪ್ಟೆಂಬರ್ 2025, 2:16 IST
<div class="paragraphs"><p>ಜಿಎಸ್‌ಟಿ</p></div>

ಜಿಎಸ್‌ಟಿ

   

(ಐಸ್ಟೋಕ್ ಚಿತ್ರ)

ನವದೆಹಲಿ: ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ಈಗ ಇರುವ ನಾಲ್ಕು ತೆರಿಗೆ ಹಂತಗಳನ್ನು ಎರಡು ಹಂತಗಳಿಗೆ ತಗ್ಗಿಸುವ ಪ್ರಸ್ತಾವಕ್ಕೆ ಜಿಎಸ್‌ಟಿ ಮಂಡಳಿಯು ಒಪ್ಪಿಗೆ ನೀಡಿದೆ.

ADVERTISEMENT

ಈ ಎರಡು ತೆರಿಗೆ ಹಂತಗಳ (ಶೇ 5 ಮತ್ತು ಶೇ 18) ಹೊಸ ವ್ಯವಸ್ಥೆಯು ನವರಾತ್ರಿಯ ಮೊದಲ ದಿನವಾದ ಸೆಪ್ಟೆಂಬರ್‌ 22ರಿಂದ ಜಾರಿಗೆ ಬರಲಿದೆ. ಈ ಮೂಲಕ ದೇಶದ ಜನರಿಗೆ ಕೇಂದ್ರ ಸರ್ಕಾರ ದಸರಾ ಭರ್ಜರಿ ಉಡುಗೊರೆ ನೀಡಿದೆ.

ಪ್ರಸ್ತುತ ಶೇ 5, 12, 18 ಹಾಗೂ ಶೇ 28ರಂತೆ ತೆರಿಗೆ ಹಂತಗಳಿವೆ. ಇವುಗಳನ್ನು ಪರಿಷ್ಕರಿಸಿ, ಕೇವಲ ಶೇ 5 ಹಾಗೂ ಶೇ 18ರಂತೆ ಎರಡು ಹಂತಗಳ ಜಿಎಸ್‌ಟಿ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ.

'ನೆಕ್ಸ್ಟ್-ಜೆನ್ ಜಿಎಸ್‌ಟಿ ಪರಿಷ್ಕರಣೆ' ಇಂತಿದೆ:

*ದಿನನಿತ್ಯದ ಬಳಕೆಯ ಆಹಾರ ಪದಾರ್ಥಗಳಿಗೆ ಜಿಎಸ್‌ಟಿ ಇಲ್ಲ.

*ಬೆಣ್ಣೆ, ತುಪ್ಪ, ಒಣಹಣ್ಣುಗಳು, ಸಾಂದ್ರೀಕರಿಸಿದ ಹಾಲು, ಸಾಸುಯೇಜ್‌, ಮಾಂಸ, ಸಕ್ಕರೆ ಮಿಠಾಯಿಗಳು, ಜಾಮ್‌, ಹಣ್ಣಿನ ಜೆಲ್ಲಿಗಳು, ಎಳನೀರು, ಕರಿದ ಪದಾರ್ಥಗಳು, 20 ಲೀ. ಬಾಟಲುಗಳಲ್ಲಿ ಸಂಗ್ರಹಿಸಿರುವ ಕುಡಿಯುವ ನೀರು, ಹಣ್ಣಿನ ತಿರುಳು ಅಥವಾ ಹಣ್ಣಿನ ರಸ, ಐಸ್‌ಕ್ರೀಂ, ಪೇಸ್ಟ್ರಿ, ಬಿಸ್ಕತ್ತುಗಳು, ಕಾರ್ನ್‌ಫ್ಲೇಕ್ಸ್‌ಗಳ ಮೇಲೆ ಈಗಿರುವ ಶೇ 18ರಷ್ಟು ಜಿಎಸ್‌ಟಿಯನ್ನು ಶೇ 5ಕ್ಕೆ ಇಳಿಸಲಾಗುತ್ತದೆ

*ಎಲ್ಲ ಬಗೆಯ ಚಪಾತಿ ಮತ್ತ ಪರಾಠಗಳಿಗೆ ಯಾವುದೇ ತೆರಿಗೆ ಇಲ್ಲ. ಈ ಮೊದಲು ಇವುಗಳ ಮೇಲೆ ಶೇ 5ರಷ್ಟು ತೆರಿಗೆ ಇತ್ತು

*ಟೂತ್‌ಪೌಡರ್, ಹಾಲುಣಿಸಲು ಬಳಸುವ ಬಾಟಲ್‌ಗಳು, ಅಡುಗೆ ಮನೆ ಸಲಕರಣೆಗಳು, ಬಂಬೂವಿನಿಂದ ತಯಾರಿಸಿದ ಫರ್ನಿಚರ್, ಹಣಿಗೆಗಳ ಮೇಲಿನ ಶೇ 12ರ ತೆರಿಗೆಯನ್ನು ಶೇ 5ಕ್ಕೆ ಇಳಿಸಲಾಗುತ್ತದೆ

*ಶಾಂಪೂ, ಟಾಲ್ಕಮ್‌ ಪೌಡರ್, ಟೂತ್‌ಪೇಸ್ಟ್‌, ಟೂತ್‌ಬ್ರಶ್‌, ಫೇಸ್‌ ಪೌಡರ್, ಸೋಪು, ಹೇರ್‌ ಆಯಿಲ್‌ ಮೇಲೆ ಶೇ 18ರ ಬದಲು ಶೇ 5ರಷ್ಟು ತೆರಿಗೆ ವಿಧಿಸಲಾಗುವುದು

*ಸಿಮೆಂಟ್‌ಗೆ ಈಗಿನ ಶೇ 28ರ ಬದಲು ಶೇ 18ರಷ್ಟು ತೆರಿಗೆ

*1,200 ಸಿ.ಸಿಗಿಂತ ಕಡಿಮೆ ಸಾಮರ್ಥ್ಯದ ಹಾಗೂ 4 ಸಾವಿರ ಎಂ.ಎಂಗಿಂತ ಹೆಚ್ಚು ಉದ್ದ ಇರದ ಪೆಟ್ರೋಲ್‌, ಎಲ್‌ಪಿಜಿ ಹಾಗೂ ಸಿಎನ್‌ಜಿ ವಾಹನಗಳ ಮೇಲಿನ ಶೇ 28ರಷ್ಟು ತೆರಿಗೆ ಶೇ18ಕ್ಕೆ ಇಳಿಕೆ

*1,500 ಸಿ.ಸಿ ವರೆಗಿನ ಹಾಗೂ 4 ಸಾವಿರ ಎಂ.ಎಂ ಉದ್ದದ ಡಿಸೇಲ್ ವಾಹನಗಳಿಗೂ ಶೇ 18ರಷ್ಟು ತೆರಿಗೆ. ಸದ್ಯ ಇವುಗಳ ಮೇಲೆಯೂ ಶೇ 28ರಷ್ಟು ತೆರಿಗೆ ಇದೆ

*1,200 ಸಿ.ಸಿ ಗಿಂತ ಹೆಚ್ಚು ಸಾಮರ್ಥ್ಯದ ಪೆಟ್ರೋಲ್‌ ಕಾರುಗಳು, 1,500 ಸಿ.ಸಿಗಿಂತ ಅಧಿಕ ಸಾಮರ್ಥ್ಯದ ಡಿಸೇಲ್ ಕಾರುಗಳಿಗೆ ಶೇ 40ರಷ್ಟು ತೆರಿಗೆ

*350 ಸಿ.ಸಿ ವರೆಗಿನ ಮೋಟರ್‌ಸೈಕಲ್‌ಗಳು, ಏರ್ ಕಂಡಿಷನರ್‌ಗಳು, ಡಿಷ್‌ ವಾಶರ್‌ಗಳು, ಟಿ.ವಿ ಸೇರಿದಂತೆ ಗ್ರಾಹಕ ಬಳಕೆಯ ಎಲೆಕ್ಟ್ರಾನಿಕ್ಸ್‌ ಸರಕುಗಳ ಮೇಲಿನ ಶೇ 28ರಷ್ಟು ತೆರಿಗೆಯನ್ನು ಶೇ18ಕ್ಕೆ ಇಳಿಸಲಾಗುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.