ಲೋಕಸಭೆ ಅಧಿವೇಶನ
ಪ್ರಾತಿನಿಧಿಕ ಚಿತ್ರ
ನವದೆಹಲಿ: ಹಾಲಿನ ಉತ್ಪನ್ನಗಳು, ಕೃಷಿಯಲ್ಲಿ ಬಳಕೆ ಮಾಡುವ ವಿವಿಧ ಉತ್ಪನ್ನಗಳು ಹಾಗೂ ಆಹಾರ ಸಂಸ್ಕರಣೆಯಲ್ಲಿ ಬಳಕೆಯಾಗುವ ಉತ್ಪನ್ನಗಳ ಮೇಲಿನ ಜಿಎಸ್‌ಟಿ ಇಳಿಕೆ ಕ್ರಮದಿಂದಾಗಿ 10 ಕೋಟಿಗೂ ಹೆಚ್ಚಿನ ರೈತರಿಗೆ ನೇರವಾಗಿ ಪ್ರಯೋಜನ ಆಗಲಿದೆ ಎಂದು ಕೇಂದ್ರ ಸಹಕಾರ ಸಚಿವಾಲಯ ಹೇಳಿದೆ.
ಹಾಲು ಮತ್ತು ಪನೀರ್‌ಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ. ಕೆಲವು ಉಪಕರಣಗಳ ಮೇಲಿನ ತೆರಿಗೆ ಕಡಿಮೆ ಮಾಡಲಾಗಿದೆ. ಇದರಿಂದಾಗಿ ರೈತರಿಗೆ ಹಾಗೂ ಹಾಲು ಸಹಕಾರ ಸಂಘಗಳಿಗೆ ಹೆಚ್ಚು ಲಾಭ ಆಗುವ ಸಾಧ್ಯತೆ ಇದೆ.
ಅಮುಲ್‌ನಂತಹ ಪ್ರಮುಖ ಹಾಲು ಉತ್ಪಾದಕ ಸಂಸ್ಥೆಗಳು ತೆರಿಗೆ ಇಳಿಕೆ ಕ್ರಮವನ್ನು ಸ್ವಾಗತಿಸಿವೆ.
ಟ್ರ್ಯಾಕ್ಟರ್ ಹಾಗೂ ಕೆಲವು ಕೃಷಿ ಉಪಕರಣಗಳ ಮೇಲಿನ ತೆರಿಗೆ ಇಳಿಕೆ ಕ್ರಮವು ಮಿಶ್ರ ಬೇಸಾಯ ಹಾಗೂ ಪಶು ಸಾಕಣೆಯಲ್ಲಿ ತೊಡಗಿರುವ ಸಣ್ಣ ರೈತರಿಗೆ ಪ್ರಯೋಜನಕಾರಿ ಆಗಿದೆ ಎಂದು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.