ಹ್ಯುಂಡೇ ಮೋಟರ್
ರಾಯಿಟರ್ಸ್ ಚಿತ್ರ
ಸೋಲ್: ಬೇಡಿಕೆ ಕುಸಿತ ಹಾಗೂ ಅಮೆರಿಕ ವಿಧಿಸಿರುವ ಪ್ರತಿ ಸುಂಕದ ಕಾರಣಕ್ಕೆ ದಕ್ಷಿಣ ಕೊರಿಯಾದಲ್ಲಿ ತನ್ನ ಕೆಲವು ಎಲೆಕ್ಟ್ರಿಕ್ ವಾಹನಗಳ ತಯಾರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಹ್ಯುಂಡೇ ಮೋಟರ್ ಯೋಜಿಸಿದೆ. ಈ ಕುರಿತು ಮೂಲಗಳು ತಿಳಿಸಿರುವುದಾಗಿ 'ಯೋನ್ಹಾಪ್' ಸುದ್ದಿ ಸಂಸ್ಥೆ ಗುರುವಾರ ವರದಿ ಮಾಡಿದೆ.
ದಕ್ಷಿಣ ಕೊರಿಯಾ ಮೂಲದ ಈ ಉದ್ಯಮವು, Ioniq 5 ಹಾಗೂ Kona ಸರಣಿಯ ವಾಹನಗಳು ಸೇರಿದಂತೆ ಇತರ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವ ತನ್ನ ಉಲ್ಸಾನ್ ಸಂಕೀರ್ಣದಲ್ಲಿ ಏಪ್ರಿಲ್ 24ರಿಂದ 30ರವರೆಗೆ ಉತ್ಪಾದನೆ ನಿಲ್ಲಿಸಲಿದೆ ಎನ್ನಲಾಗಿದೆ.
ಸರ್ಕಾರವು ಇ.ವಿ. ವಾಹನಗಳಿಗೆ ಸಬ್ಸಿಡಿ ತೆಗೆದುಹಾಕಿದ್ದು ಹಾಗೂ ಆಮದು ವಾಹನಗಳ ಮೇಲೆ ಅಮೆರಿಕವು ಪ್ರತಿಸುಂಕ ವಿಧಿಸುತ್ತಿರುವ ಕಾರಣದಿಂದಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಏಪ್ರಿಲ್‌ನಲ್ಲಿ ಬೇಡಿಕೆ ಕುಸಿದಿದೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಹ್ಯುಂಡೇ ಮೋಟರ್ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಕಾರ್‌ಗಳು ಮತ್ತು ಲಘು ಸರಕು ವಾಹನಗಳ ಆಮದಿನ ಮೇಲೆ ಶೇ 25ರಷ್ಟು ಪ್ರತಿಸುಂಕ ವಿಧಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.