ರಫ್ತು
ನವದೆಹಲಿ: ಭಾರತದಿಂದ ಅಮೆರಿಕಕ್ಕೆ ಆಗುವ ರಫ್ತುಗಳ ಪ್ರಮಾಣವು ಜುಲೈಗೆ ಹೋಲಿಸಿದರೆ ಆಗಸ್ಟ್‌ನಲ್ಲಿ ಶೇಕಡ 14ರಷ್ಟು ಕಡಿಮೆ ಆಗಿದೆ.
ಭಾರತದ ಸರಕುಗಳ ಮೇಲೆ ಅಮೆರಿಕವು ಆಗಸ್ಟ್‌ನಿಂದ ಶೇ 50ರಷ್ಟು ತೆರಿಗೆ ವಿಧಿಸುತ್ತಿದೆ. ಆಗಸ್ಟ್‌ನಲ್ಲಿ ಭಾರತದಿಂದ ಅಮೆರಿಕಕ್ಕೆ ₹60,464 ಕೋಟಿ ಮೌಲ್ಯದ ಸರಕುಗಳು, ಸೇವೆಗಳು ರಫ್ತಾಗಿವೆ. ಜುಲೈನಲ್ಲಿ ರಫ್ತು ಮೊತ್ತವು ₹70,512 ಕೋಟಿ ಆಗಿತ್ತು.
ಅಮೆರಿಕಕ್ಕೆ ಆಗುವ ರಫ್ತಿನ ಮೊತ್ತ ಕಡಿಮೆ ಆಗಿದ್ದರೂ, ಭಾರತದ ರಫ್ತು ಪಟ್ಟಿಯಲ್ಲಿ ಅಮೆರಿಕವು ಆಗಸ್ಟ್‌ನಲ್ಲಿಯೂ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.
ಹಿಂದಿನ ವರ್ಷದ ಆಗಸ್ಟ್‌ಗೆ ಹೋಲಿಸಿದರೆ ಈ ವರ್ಷದ ಆಗಸ್ಟ್‌ನಲ್ಲಿ ಅಮೆರಿಕಕ್ಕೆ ರಫ್ತು ಪ್ರಮಾಣವು ಶೇ 7.15ರಷ್ಟು ಹೆಚ್ಚಾಗಿದೆ ಎಂದು ವಾಣಿಜ್ಯ ಸಚಿವಾಲಯದ ಅಂಕಿ–ಅಂಶಗಳು ಹೇಳಿವೆ.
ಅಮೆರಿಕದ ನಂತರದ ಸ್ಥಾನದಲ್ಲಿ ಯುಎಇ, ನೆದರ್ಲೆಂಡ್ಸ್, ಚೀನಾ, ಬ್ರಿಟನ್ ಇವೆ.
ಆಗಸ್ಟ್ 7ರಿಂದ ಅನ್ವಯ ಆಗುವಂತೆ ಅಮೆರಿಕವು ಭಾರತದ ಸರಕುಗಳ ಮೇಲೆ ಶೇ 25ರಷ್ಟು ತೆರಿಗೆ ವಿಧಿಸಿದೆ. ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿರುವುದಕ್ಕಾಗಿ ಅಮೆರಿಕವು ಆಗಸ್ಟ್ 27ರಿಂದ ಅನ್ವಯ ಆಗುವಂತೆ ಭಾರತದ ಸರಕುಗಳ ಮೇಲೆ ಹೆಚ್ಚುವರಿಯಾಗಿ ಶೇ 25ರಷ್ಟು ತೆರಿಗೆ ವಿಧಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.