ADVERTISEMENT

ದೇಶದ ನಾಗರಿಕ ವಿಮಾನಯಾನ ಮಾರುಕಟ್ಟೆಯಲ್ಲಿ ಇಂಡಿಗೊ ಪಾಲು ಇಳಿಕೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 15:33 IST
Last Updated 28 ಡಿಸೆಂಬರ್ 2025, 15:33 IST
ಇಂಡಿಗೊ
ಇಂಡಿಗೊ   

ನವದೆಹಲಿ: ದೇಶದ ನಾಗರಿಕ ವಿಮಾನಯಾನ ಮಾರುಕಟ್ಟೆಯಲ್ಲಿ ಇಂಡಿಗೊ ಕಂಪನಿ ಪಾಲು ನವೆಂಬರ್‌ನಲ್ಲಿ ಶೇ 63.6ಕ್ಕೆ ಇಳಿದಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ತಿಳಿಸಿದೆ. ಅಕ್ಟೋಬರ್‌ನಲ್ಲಿ ಕಂಪನಿಯು ಶೇ 65.6ರಷ್ಟು ಪಾಲು ಹೊಂದಿತ್ತು.

ಈ ತಿಂಗಳ ಆರಂಭದಲ್ಲಿ ಇಂಡಿಗೊ ಕಂಪನಿಯ ವಿಮಾನಗಳ ಕಾರ್ಯಾಚರಣೆಯಲ್ಲಿ ಉಂಟಾದ ಅಡಚಣೆಯು ಇಳಿಕೆಗೆ ಕಾರಣ ಎಂದು ಡಿಜಿಸಿಎ ಹೇಳಿದೆ.

ಏರ್‌ ಇಂಡಿಯಾ ಸಮೂಹ (ಏರ್‌ ಇಂಡಿಯಾ ಮತ್ತು ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌) ಮತ್ತು ಸ್ಪೈಸ್‌ಜೆಟ್‌ ಮಾರುಕಟ್ಟೆ ಪಾಲು ಕ್ರಮವಾಗಿ ಶೇ 26.7 ಮತ್ತು ಶೇ 3.7ಕ್ಕೆ ಹೆಚ್ಚಳವಾಗಿದೆ. ಅಕ್ಟೋಬರ್‌ನಲ್ಲಿ ಈ ಪ್ರಮಾಣ ಶೇ 25.7 ಮತ್ತು ಶೇ 2.6ರಷ್ಟಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.