ADVERTISEMENT

500 ಹೆಚ್ಚುವರಿ ಸೇವಾ ಕೇಂದ್ರ ಸ್ಥಾಪಿಸಲು ಮಾರುತಿ ನಿರ್ಧಾರ

ಪಿಟಿಐ
Published 21 ಜುಲೈ 2025, 12:21 IST
Last Updated 21 ಜುಲೈ 2025, 12:21 IST
ಮಾರುತಿ ಸುಜುಕಿ
ಮಾರುತಿ ಸುಜುಕಿ   

ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಇಂಡಿಯಾ, ಪ್ರಸಕ್ತ ಆರ್ಥಿಕ ವರ್ಷದಲ್ಲಿ 500 ಹೆಚ್ಚುವರಿ ಸೇವಾ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಿದೆ.

2024–25ರ ಆರ್ಥಿಕ ವರ್ಷದಲ್ಲಿ 460 ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಇದೀಗ 500 ಹೊಸ ಸೇವಾ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ಪೈಕಿ 91 ಕೇಂದ್ರಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ ಎಂದು ಮಾರುತಿ ಸುಜುಕಿ ಇಂಡಿಯಾದ (ಎಂಎಸ್‌ಐ) ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹಿಸಾಶಿ ಟಕೆಯುಚಿ ಹೇಳಿದ್ದಾರೆ.

ದೇಶದ 2,764 ನಗರಗಳಲ್ಲಿ ಕಂಪನಿಯು 5,500 ಸೇವಾ ಕೇಂದ್ರಗಳನ್ನು ಈಗಾಗಲೇ ಹೊಂದಿದೆ. ಇದಕ್ಕಾಗಿ ಕಂಪನಿಯ ಡೀಲರ್‌ಗಳ ಸಹಕಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸೋಮವಾರ ಹೇಳಿದ್ದಾರೆ. 

ADVERTISEMENT

ಕಂಪನಿಯು ಈಗ ವರ್ಷಕ್ಕೆ 3 ಕೋಟಿ ಗ್ರಾಹಕರಿಗೆ ಸೇವೆ ನೀಡುವ ಸಾಮರ್ಥ್ಯ ಹೊಂದಿದೆ. ಕಳೆದ ಆರ್ಥಿಕ ವರ್ಷದಲ್ಲಿ 2.7 ಕೋಟಿಗೂ ಹೆಚ್ಚು ಗ್ರಾಹಕರಿಗೆ ಸೇವೆ ನೀಡಲಾಗಿತ್ತು. ಇದು ಈವರೆಗಿನ ಅತ್ಯಧಿಕ ಸಂಖ್ಯೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.