ADVERTISEMENT

ಹಣ್ಣು ಸಂಸ್ಕರಣಾ ಘಟಕ: ಕರ್ನಾಟಕದಲ್ಲಿ ₹125 ಕೋಟಿ ಹೂಡಿಕೆಗೆ ಮದರ್‌ ಡೇರಿ ನಿರ್ಧಾರ

ಪಿಟಿಐ
Published 17 ಮಾರ್ಚ್ 2024, 13:30 IST
Last Updated 17 ಮಾರ್ಚ್ 2024, 13:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ತನ್ನ ವ್ಯಾಪಾರದ ನೆಲೆಯ ವಿಸ್ತರಣೆಗೆ ಮುಂದಾಗಿರುವ ಮದರ್‌ ಡೇರಿಯು, ₹650 ಕೋಟಿ ಬಂಡವಾಳ ಹೂಡಿಕೆಗೆ ನಿರ್ಧರಿಸಿದೆ. 

ಮಹಾರಾಷ್ಟ್ರದ ನಾಗ್ಪುರದಲ್ಲಿ ₹525 ಕೋಟಿ ವೆಚ್ಚದಡಿ ಹೊಸದಾಗಿ ಹಾಲು ಸಂಸ್ಕರಣಾ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಘಟಕದಲ್ಲಿ ಪ್ರತಿದಿನ 6 ಲಕ್ಷ ಲೀಟರ್‌ ಹಾಲು ಸಂಸ್ಕರಿಸುವ ಗುರಿ ಹೊಂದಲಾಗಿದೆ. ಅಲ್ಲದೆ, 10 ಲಕ್ಷ ಲೀಟರ್‌ಗೂ ವಿಸ್ತರಿಸುವ ನಿಟ್ಟಿನಲ್ಲಿ ಘಟಕ ನಿರ್ಮಿಸಲಾಗುತ್ತದೆ ಎಂದು ಮದರ್‌ ಡೇರಿಯ ಹಣ್ಣುಗಳು ಮತ್ತು ತರಕಾರಿಗಳ ಪ್ರೈವೆಟ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಬಂದ್ಲೀಷ್ ಅವರು, ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ADVERTISEMENT

ಕರ್ನಾಟಕದಲ್ಲಿ ₹125 ಕೋಟಿ ವೆಚ್ಚದಲ್ಲಿ ಹಣ್ಣಿನ ಸಂಸ್ಕರಣಾ ಘಟಕ ಸ್ಥಾಪಿಸಲಾಗುವುದು. ‘ಸಫಲ್‌ ಬ್ರ್ಯಾಂಡ್‌’ ಹೆಸರಿನಡಿ ಇದನ್ನು ಅಭಿವೃದ್ಧಿಪಡಿಸಲಾಗುತ್ತದೆ. ಇನ್ನು ಎರಡು ವರ್ಷಗಳಲ್ಲಿ ಈ ಘಟಕಗಳ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.‌

ನವದೆಹಲಿಯಲ್ಲಿ ಹಾಲು ಪೂರೈಕೆಯಲ್ಲಿ ಮದರ್‌ ಡೇರಿಯು ಮುಂಚೂಣಿಯಲ್ಲಿದೆ. ಅಲ್ಲಿ ಸಂಸ್ಕರಣಾ ಘಟಕಗಳ ಸಾಮರ್ಥ್ಯ ಹೆಚ್ಚಿಸಲು ₹100 ಕೋಟಿ ಹೂಡಿಕೆಗೆ ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ. 

ಪ್ರಸ್ತುತ ಡೇರಿ ವ್ಯಾಪ್ತಿಯಲ್ಲಿ ಒಂಬತ್ತು ಹಾಲು ಸಂಸ್ಕರಣಾ ಘಟಕಗಳಿದ್ದು, ಪ್ರತಿದಿನ 50 ಲಕ್ಷ ಲೀಟರ್‌ ಹಾಲು ಉತ್ಪಾದಿಸಲಾಗುತ್ತಿದೆ.  

ಹಣ್ಣು ಮತ್ತು ತರಕಾರಿ ಸಂಸ್ಕರಣೆಯ ನಾಲ್ಕು ಘಟಕಗಳಿವೆ. ಖಾದ್ಯ ತೈಲ ಉತ್ಪಾದನೆಗೆ 15 ಘಟಕಗಳನ್ನು ಹೊಂದಿದೆ. 2022–23ರಲ್ಲಿ ಡೇರಿಯು ₹14,500 ಕೋಟಿ ವಹಿವಾಟು ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.