ಕೃಷಿ
ನವದೆಹಲಿ: ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ಈಗ ಇರುವ ನಾಲ್ಕು ತೆರಿಗೆ ಹಂತಗಳನ್ನು ಎರಡು ಹಂತಗಳಿಗೆ ತಗ್ಗಿಸುವ ಪ್ರಸ್ತಾವಕ್ಕೆ ಮಂಡಳಿಯು ಒಪ್ಪಿಗೆ ನೀಡಿದೆ. ಈ ಎರಡು ತೆರಿಗೆ ಹಂತಗಳ (ಶೇ 5 ಮತ್ತು ಶೇ 18) ಹೊಸ ವ್ಯವಸ್ಥೆಯು ನವರಾತ್ರಿಯ ಮೊದಲ ದಿನವಾದ ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿದೆ. ಈ ಮೂಲಕ ದೇಶದ ಜನರಿಗೆ ಕೇಂದ್ರ ಸರ್ಕಾರ ದಸರಾ ಭರ್ಜರಿ ಉಡುಗೊರೆ ನೀಡಿದೆ.
ಹೊಸ ತೆರಿಗೆಯಲ್ಲಿ ರೈತರಿಗೆ ಹೆಚ್ಚಿನ ಬೆಂಬಲ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
'ನೆಕ್ಸ್ಟ್-ಜೆನ್ ಜಿಎಸ್‌ಟಿ ಪರಿಷ್ಕರಣೆ' | ಕೃಷಿ ಕ್ಷೇತ್ರದಲ್ಲಿ ಯಾವುದೆಲ್ಲ ಅಗ್ಗ?
ಶೇ 18ರಷ್ಟು ಜಿಎಸ್‌ಟಿ ಶೇ 5ಕ್ಕೆ ಇಳಿಕೆ:
*ಟ್ರ್ಯಾಕ್ಟರ್ ಚಕ್ರ ಹಾಗೂ ಬಿಡಿಭಾಗಗಳು,
*250 ಸಿಸಿಗಿಂತ ಹೆಚ್ಚಿನ ಸಿಲಿಂಡರ್ ಸಾಮರ್ಥ್ಯದ ಕೃಷಿ ಡೀಸೆಲ್ ಎಂಜಿನ್‌ಗಳು,
*ಟ್ರ್ಯಾಕ್ಟರ್‌ಗಳ ಹೈಡ್ರಾಲಿಕ್ ಪಂಪ್,
*ಹಿಂಬದಿ ಚಕ್ರಗಳ ರಿಮ್, ಟ್ರಾನ್ಸ್‌ಮಿಷನ್ ಹೌಸಿಂಗ್,
*ಬಂಪರ್, ಬ್ರೇಕ್, ರೇಡಿಯೇಟರ್ ಅಸೆಂಬ್ಲಿ,
*ಕೂಲಿಂಗ್ ಸಿಸ್ಟಂ ಬಿಡಿಭಾಗ
ಶೇ 12ರಷ್ಟು ಜಿಎಸ್‌ಟಿ ಶೇ 5ಕ್ಕೆ ಇಳಿಕೆ:
*ಟ್ರ್ಯಾಕ್ಟರ್,
*ಜೈವಿಕ ಕೀಟನಾಶಕ,
*ಕೃಷಿ ಉತ್ಪನ್ನಗಳ ಪೋಷಕಾಂಶ,
*ನೀರಾವರಿ ವ್ಯವಸ್ಥೆ,
*ಸ್ಪ್ರಿಂಕ್ಲರ್,
*ಕೃಷಿ, ತೋಟಗಾರಿಕೆ, ಅರಣ್ಯ - ಮಣ್ಣನ್ನು ಹದಗೊಳಿಸುವ ಯಂತ್ರಗಳು,
*ಸಾಗುವಳಿ, ಬೇಸಾಯ, ವ್ಯವಸಾಯ,
*ಕೊಯ್ಲು, ಒಕ್ಕಣೆ
*15 ಎಚ್‌ಪಿ ಮೀರದ ಡೀಸೆಲ್ ಎಂಜಿನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.