ADVERTISEMENT

ಆರ್ಥಿಕ ಹಿಂಜರಿತದ ಭೀತಿ: ಕಚ್ಚಾ ತೈಲ ಬೆಲೆಯಲ್ಲಿ ಭಾರಿ ಕುಸಿತ

ರಾಯಿಟರ್ಸ್
Published 7 ಜುಲೈ 2022, 1:45 IST
Last Updated 7 ಜುಲೈ 2022, 1:45 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮವಾಗಿ ತೈಲ ಬೇಡಿಕೆಯ ಬಗ್ಗೆ ಕಳವಳ ಉಂಟಾಗಿದ್ದು, ಗುರುವಾರದ ಆರಂಭಿಕ ವಹಿವಾಟಿನಲ್ಲಿ ಕಚ್ಚಾ ತೈಲ ಬೆಲೆಯು ಕುಸಿತ ಕಂಡಿದೆ. ಬುಧವಾರ ರಾತ್ರಿ ತೈಲ ಬೆಲೆಯು ಮೂರು ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿತ್ತು.

ಬ್ರೆಂಟ್ ಕಚ್ಚಾ ತೈಲ ಬೆಲೆಯು ರಾತ್ರಿ 12.13ರ ವೇಳೆಗೆ ಬ್ಯಾರೆಲ್‌ಗೆ 71 ಸೆಂಟ್‌ಗಳಷ್ಟು ಇಳಿದು, 99.98 ಡಾಲರ್‌ಗೆ ತಲುಪಿತು. ಡಬ್ಲ್ಯುಟಿಐ ತೈಲವು 62 ಸೆಂಟ್‌ಗಳಷ್ಟು ಕುಸಿತ ಕಂಡಿತು. ಹೀಗಾಗಿ 97.91 ಡಾಲರ್‌ ಆಯಿತು.

ಇದಕ್ಕೂ ಮೊದಲು ಮಂಗಳವಾರ ತೈಲ ಬೆಲೆಯಲ್ಲಿ ಭಾರಿ ಕುಸಿತವುಂಟಾಗಿತ್ತು. ಡಬ್ಲ್ಯುಟಿಐ ಶೇಕಡ 8 ರಷ್ಟು ಕುಸಿದರೆ, ಬ್ರೆಂಟ್ ಶೇಕಡ 9ರಷ್ಟು ಇಳಿದಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.