ADVERTISEMENT

ಆಮಿಷಕ್ಕೆ ಬಲಿಯಾಗಬೇಡಿ: ತೈಲ ಮಾರಾಟ ಸಂಸ್ಥೆಗಳ ಮನವಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2018, 20:15 IST
Last Updated 21 ನವೆಂಬರ್ 2018, 20:15 IST
ಪ್ರಜಾವಾಣಿ ವಾರ್ತೆ
ಪ್ರಜಾವಾಣಿ ವಾರ್ತೆ   

ಮುಂಬೈ: ಅಡುಗೆ ಅನಿಲ ಸಿಲಿಂಡರಗಳ (ಎಲ್‌ಪಿಜಿ) ವಿತರಕರನ್ನು ನೇಮಕ ಮಾಡಲಾಗುವುದು ಎಂದು ಆಮಿಷ ಒಡ್ಡುವ ನಕಲಿ ಅಂತರ್ಜಾಲ ತಾಣಗಳ ವಂಚನೆಗೆ ಬಲಿಯಾಗಬಾರದು ಎಂದು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿವೆ.

ವಂಚಕರು ಪ್ರಧಾನ ಮಂತ್ರಿ ಉಜ್ವಲ ಯೋಜನಾ ಅಥವಾ ಹಿಂದೆ ಜಾರಿಯಲ್ಲಿದ್ದ ರಾಜೀವ್‌ ಗಾಂಧಿ ಗ್ರಾಮೀಣ ಎಲ್‌ಪಿಜಿ ವಿತರಕ ಯೋಜನೆ ಹೆಸರಿನಲ್ಲಿ www.lpgvitarakchayan.org ಸೇರಿದಂತೆ ವಿವಿಧ ಹೆಸರಿನಲ್ಲಿ ನಕಲಿ ಅಂತರ್ಜಾಲ ತಾಣಗಳನ್ನು ಸೃಷ್ಟಿಸಿ ವಂಚನೆ ಎಸಗುತ್ತಿವೆ. ಈ ನಕಲಿ ತಾಣಗಳು ಅಧಿಕೃತ ತಾಣದ ವಿನ್ಯಾಸವನ್ನೇ ಹೋಲುತ್ತವೆ. ನೋಂದಾಯಿತ ಕಚೇರಿ ಮುಂಬೈನಲ್ಲಿ ಇದೆ ಎಂಬ ಮಾಹಿತಿ ಈ ತಾಣಗಳಲ್ಲಿದೆ. ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿವೆ.

ಐಒಸಿ, ಎಚ್‌ಪಿಸಿಎಲ್‌ ಮತ್ತು ಬಿಪಿಸಿಎಲ್‌ ಹೆಸರಿನಲ್ಲಿ ನಕಲಿ ಇ–ಮೇಲ್‌ ವಿಳಾಸದ (info@ujjwaladealer.com) ಮೂಲಕ ಬರುವ ಸುಳ್ಳು ಮಾಹಿತಿಗೆ ಮರುಳಾಗಬೇಡಿ. ವಿತರಕರ ನೇಮಕಾತಿಗಾಗಿ ಹಣ ಪಾವತಿಸಿ ವಂಚನೆಗೆ ಒಳಗಾಗಬಾರದು ಎಂದು ಗ್ರಾಹಕರಲ್ಲಿ ತೈಲ ಮಾರಾಟ ಸಂಸ್ಥೆಗಳು ಮನವಿ ಮಾಡಿಕೊಂಡಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.