ಬೆಂಗಳೂರು: ಆ್ಯಪಲ್ ಐಫೋನ್‌ನ ತಯಾರಿಕೆಯ ಒಪ್ಪಂದ ಮಾಡಿಕೊಂಡಿರುವ ಪೆಗಟ್ರಾನ್ ಸಂಸ್ಥೆ, ಚೆನ್ನೈ ಘಟಕದಲ್ಲಿ ನೂತನ ಐಫೋನ್ 14 ಉತ್ಪಾದಿಸಲಿದೆ.
ಈಗಾಗಲೇ ವಿಸ್ಟ್ರಾನ್ ಮತ್ತು ಫಾಕ್ಸ್‌ಕಾನ್ ಘಟಕಗಳಲ್ಲಿ ಆ್ಯಪಲ್ ಐಫೋನ್ ಮತ್ತು ಇತರ ಉಪಕರಣಗಳನ್ನು ತಯಾರಿಸಲಾಗುತ್ತಿದೆ.
ಪೆಗಟ್ರಾನ್ ಮೂರನೇ ಸಂಸ್ಥೆಯಾಗಿದ್ದು, ಹೊಸದಾಗಿ ಬಿಡುಗಡೆಯಾದ ಐಫೋನ್ 14 ಅನ್ನು ಚೆನ್ನೈನಲ್ಲಿ ನಿರ್ಮಿಸಲಾದ ನೂತನ ಘಟಕದಲ್ಲಿ ತಯಾರಿಸುವುದಾಗಿ ಹೇಳಿದೆ.
ತಮಿಳುನಾಡು ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಪೆಗಟ್ರಾನ್, ಚೆನ್ನೈ ಹೊರವಲಯದಲ್ಲಿ ₹1,100 ಕೋಟಿ ವೆಚ್ಚದಲ್ಲಿ ಹೊಸ ಫ್ಯಾಕ್ಟರಿ ಸ್ಥಾಪಿಸಿದೆ.
ಸೆಪ್ಟೆಂಬರ್ 30ರಿಂದ ಹೊಸ ಘಟಕ ಕಾರ್ಯಾರಂಭ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.