ADVERTISEMENT

ಮೇ 1ರಿಂದ ಎಟಿಎಂ ಬಳಕೆ ಶುಲ್ಕ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 13:47 IST
Last Updated 30 ಏಪ್ರಿಲ್ 2025, 13:47 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಎಟಿಎಂ ಬಳಕೆ ಶುಲ್ಕವು ಗುರುವಾರದಿಂದ (ಮೇ 1ರಂದು) ಏರಿಕೆಯಾಗಲಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ನ ಆದೇಶದ ಅನ್ವಯ ಬ್ಯಾಂಕ್‌ಗಳು ಶುಲ್ಕ ಹೆಚ್ಚಳ ಮಾಡಿವೆ.

ಮಾಸಿಕ ಉಚಿತ ವಹಿವಾಟು ಮಿತಿ ಮೀರಿದರೆ ಪ್ರತಿ ವಹಿವಾಟಿಗೆ ಗ್ರಾಹಕರು ₹2 ಹೆಚ್ಚುವರಿ ಶುಲ್ಕ ಭರಿಸಬೇಕಿದೆ. ಪ್ರಸ್ತುತ ಪ್ರತಿ ವಹಿವಾಟಿಗೆ ₹21 ಶುಲ್ಕ ವಿಧಿಸಲಾಗುತ್ತಿದ್ದು, ಇದನ್ನು ಗರಿಷ್ಠ ₹23ಕ್ಕೆ ಏರಿಕೆ ಮಾಡಲಾಗಿದೆ. 

ಗ್ರಾಹಕರು ತಮ್ಮ ಖಾತೆ ಇರುವ ಬ್ಯಾಂಕ್‌ನ ಎಟಿಎಂಗಳಿಂದ ಪ್ರತಿ ತಿಂಗಳು ಉಚಿತವಾಗಿ 5 ವಹಿವಾಟು (ಹಣಕಾಸು– ಹಣಕಾಸುಯೇತರ) ನಡೆಸಲು ಅವಕಾಶವಿದೆ. ಇತರೆ ಬ್ಯಾಂಕ್‌ನ ಎಟಿಎಂಗಳಲ್ಲಾದರೆ ಮಹಾನಗರಗಳ ವ್ಯಾಪ್ತಿಯಲ್ಲಿ ಮೂರು ಮತ್ತು ಇತರೆ ಪ್ರದೇಶಗಳಲ್ಲಿ 5 ವಹಿವಾಟುಗಳನ್ನು ಉಚಿತವಾಗಿ ನಡೆಸಬಹುದಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.