ADVERTISEMENT

ಸತತ ನಾಲ್ಕನೇ ಬಾರಿ ರೆಪೊ ದರ ಇಳಿಸಿದ ಆರ್‌ಬಿಐ; ಅಗ್ಗವಾಗಲಿದೆ ಇಎಂಐ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 7:33 IST
Last Updated 7 ಆಗಸ್ಟ್ 2019, 7:33 IST
   

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ ರೆಪೊ ದರವನ್ನು (ಆರ್‌ಬಿಐ ಬ್ಯಾಂಕ್‌ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರ) ಬುಧವಾರ ಶೇ 5.40 ರಷ್ಟು ಇಳಿಕೆ ಮಾಡಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸತತ ನಾಲ್ಕನೇ ಬಾರಿಗೆ ಆರ್‌ಬಿಐ ರೆಪೊ ದರವನ್ನು ಇಳಿಸಿದೆ.

ಜೂನ್ ಮೊದಲ ವಾರದಲ್ಲಿ ರೆಪೊ ದರ ಶೇ.5.75 ಆಗಿತ್ತು. ಆರ್‌ಬಿಐ ಗವರ್ನರ್ ಶಕ್ತಿಕಾಂತದಾಸ್ ಅಧ್ಯಕ್ಷರಾಗಿರುವ ಆರು ಸದಸ್ಯರ ಹಣಕಾಸು ನೀತಿಸಮಿತಿ ರೆಪೊ ದರ ಇಳಿಕೆ ಮಾಡುವ ಈ ತೀರ್ಮಾನ ಕೈಗೊಂಡಿತ್ತು.

ಒಂಭತ್ತು ವರ್ಷಗಳ ಕಾಲಾವಧಿಯಲ್ಲಿ ಅತೀ ಕಡಿಮೆ ರೆಪೊ ದರ ಇದಾಗಿದೆ.

ADVERTISEMENT

ಸಮಿತಿಯಲ್ಲಿರುವ ನಾಲ್ವರು ಸದಸ್ಯರು ರೆಪೊ ದರವನ್ನು 0.35% ಇಳಿಕೆ ಮಾಡುವುದರ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸಿದ್ದು,ಇಬ್ಬರು ಸದಸ್ಯರು 0.25% ಇಳಿಕೆ ಮಾಡಬಹುದು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದರು.

ರೆಪೊ ದರ ಇಳಿಕೆಯಾಗಿದ್ದರಿಂದ ಇಎಂಐ ಮತ್ತು ಸಾಲದ ಮೇಲಿನ ಬಡ್ಡಿದರ ಇಳಿಕೆಯಾಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.