ಆರ್‌ಬಿಐ
ಮುಂಬೈ: ಸರ್ಕಾರದ ಜೊತೆ ವ್ಯವಹರಿಸುವ ಆರ್‌ಬಿಐ ಕಚೇರಿಗಳು ಮತ್ತು ಎಲ್ಲ ಬ್ಯಾಂಕ್‌ಗಳು ತೆರಿಗೆದಾರರ ಅನುಕೂಲಕ್ಕಾಗಿ ಮಾರ್ಚ್ 30 ಮತ್ತು 31ರಂದು ಎಂದಿನಂತೆ ಕಾರ್ಯನಿರ್ವಹಿಸಲಿವೆ.
2023–24ರ ಹಣಕಾಸು ವರ್ಷವು ಮುಕ್ತಾಯ ಆಗುತ್ತಿರುವುದರಿಂದ ಕೊನೆಯ ಎರಡು ದಿನಗಳಾದ ಶನಿವಾರ ಮತ್ತು ಭಾನುವಾರ ಸಾಮಾನ್ಯ ದಿನದಂತೆಯೇ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸಲಿವೆ. ಗ್ರಾಹಕರ ಅನುಕೂಲಕ್ಕಾಗಿ ಈ ವಿಶೇಷ ಕ್ರಮ ಕೈಗೊಳ್ಳಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತಿಳಿಸಿದೆ.
ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್‌ಫರ್ (ಎನ್‌ಇಎಫ್‌ಟಿ) ಮತ್ತು ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್ (ಆರ್‌ಟಿಜಿಎಸ್) ವ್ಯವಸ್ಥೆಯ ಮೂಲಕ ವಹಿವಾಟುಗಳು ಮಾರ್ಚ್ 31ರವರೆಗೆ ಮುಂದುವರಿಯಲಿವೆ. ಸರ್ಕಾರದ ರಶೀದಿಗಳು ಮತ್ತು ಪಾವತಿಗಳನ್ನು ಸುಲಭಗೊಳಿಸಲು, ದೇಶದಾದ್ಯಂತ ವಿಶೇಷ ಕ್ಲಿಯರಿಂಗ್ ಕಾರ್ಯಾಚರಣೆಗಳನ್ನು ನಡೆಸಲು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಸರ್ಕಾರಿ ಖಾತೆಗಳಿಗೆ ಸಂಬಂಧಿಸಿದ ಎಲ್ಲಾ ಚೆಕ್‌ಗಳನ್ನು ಅಂತಹ ಕ್ಲಿಯರಿಂಗ್‌ನಲ್ಲಿ ಪ್ರಸ್ತುತಪಡಿಸಬಹುದು ಎಂದು ಆರ್‌ಬಿಐ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.