ADVERTISEMENT

₹1 ರೀಚಾರ್ಜ್ ಪ್ಲ್ಯಾನ್ ಪರಿಚಯಿಸಿದ ರಿಲಯನ್ಸ್ ಜಿಯೊ: ಒಂದು ದಿನ ವ್ಯಾಲಿಡಿಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಡಿಸೆಂಬರ್ 2021, 15:42 IST
Last Updated 16 ಡಿಸೆಂಬರ್ 2021, 15:42 IST
ಕಡಿಮೆ ಬೆಲೆಯ ರೀಚಾರ್ಜ್ ಪ್ಯಾಕ್ ಪರಿಚಯಿಸಿದ ಜಿಯೊ
ಕಡಿಮೆ ಬೆಲೆಯ ರೀಚಾರ್ಜ್ ಪ್ಯಾಕ್ ಪರಿಚಯಿಸಿದ ಜಿಯೊ   

ಬೆಂಗಳೂರು: ಪ್ರಮುಖ ಖಾಸಗಿ ಟೆಲಿಕಾಂ ಸೇವಾದಾರ ಕಂಪನಿ ರಿಲಯನ್ಸ್ ಜಿಯೊ, ₹1 ಬೆಲೆಯ ರೀಚಾರ್ಚ್ ಪ್ಲ್ಯಾನ್ ಪರಿಚಯಿಸಿದೆ.

ಪ್ರಿಪೇಯ್ಡ್ ಗ್ರಾಹಕರು ₹1 ರೀಚಾರ್ಜ್ ಮಾಡಿಸಿಕೊಂಡರೆ, ಒಂದುದಿನ ವ್ಯಾಲಿಡಿಟಿಯ ಜತೆಗೆ 10ಎಂಬಿ ಡೇಟಾ ದೊರೆಯಲಿದೆ.

ಹೊಸ ಪ್ಲ್ಯಾನ್ ಮೈ ಜಿಯೊ ಆ್ಯಪ್‌ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದೆ. ಜಿಯೊ ವೆಬ್‌ಸೈಟ್‌ನಲ್ಲಿ ಪ್ಲ್ಯಾನ್ ವಿವರ ಮತ್ತು ರೀಚಾರ್ಜ್ ಕೊಡುಗೆ ಲಭ್ಯವಿಲ್ಲ. ಬದಲಾಗಿ ಮೈಜಿಯೊ ಆ್ಯಪ್‌ನಲ್ಲಿ ಅದರ್ ಪ್ಲ್ಯಾನ್ಸ್ ಅಡಿಯಲ್ಲಿ ವ್ಯಾಲ್ಯೂ ಎಂದಿರುವಲ್ಲಿ ಮೋರ್ ಕ್ಲಿಕ್ ಮಾಡಿದಾಗ ₹1 ರೀಚಾರ್ಜ್ ಆಯ್ಕೆ ದೊರೆಯುತ್ತದೆ.

ADVERTISEMENT

ದೇಶದಲ್ಲಿನ ಇತರ ಯಾವುದೇ ಟೆಲಿಕಾಂ ಸೇವಾದಾರ ಕಂಪನಿಗಳಿಗೆ ಹೋಲಿಸಿದರೆ ಈ ದರಕ್ಕೆ ಡೇಟಾ ಕೊಡುಗೆ ನೀಡುವ ಯಾವುದೇ ಪ್ಲ್ಯಾನ್ ಇಲ್ಲ ಎನ್ನುವುದು ಗಮನಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.