ಮುಂಬೈ: ₹ 2,000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ಹಿಂಪಡೆದು ಎರಡು ವರ್ಷಗಳು ಕಳೆದಿದ್ದರೂ, ಮೂರು ಸಾವಿರಕ್ಕಿಂತ ಹೆಚ್ಚು ನೋಟುಗಳು ಇನ್ನೂ ಚಲಾವಣೆಯಲ್ಲಿವೆ ಎಂದು ಆರ್‌ಬಿಐ ತಿಳಿಸಿದೆ.
₹ 2,000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ಹಿಂಪಡೆಯುವುದಾಗಿ ಆರ್‌ಬಿಐ 2023ರ ಮೇ 19ರಂದು ಪ್ರಕಟಿಸಿತ್ತು. ಆದಾಗ್ಯೂ ಈ ನೋಟುಗಳು ಇನ್ನೂ ಕಾನೂನುಬದ್ಧವಾಗಿ ಚಲಾವಣೆಯಲ್ಲಿವೆ.
'2023ರ ಮೇ 19ರಂದು ಚಲಾವಣೆ ರದ್ದುಪಡಿಸಿದಾಗ ಚಾಲ್ತಿಯಲ್ಲಿದ್ದ ₹ 2,000 ಮುಖಬೆಲೆಯ ನೋಟುಗಳ ಮೊತ್ತ ₹ 3.56 ಲಕ್ಷ ಕೊಟಿಯಷ್ಟಿತ್ತು. ಅದು, 2025ರ ಏಪ್ರಿಲ್ 30ರ ವೇಳೆಗೆ ₹ 6,266 ಕೋಟಿಗೆ ಇಳಿದಿದೆ' ಎಂದು ಆರ್‌ಬಿಐ ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿದೆ.
'2023ರ ಮೇ 19ರಂದು ಚಲಾವಣೆಯಲ್ಲಿದ್ದ ₹ 2,000 ನೋಟುಗಳ ಪೈಕಿ ಶೇ 98.24ರಷ್ಟು ನೋಟುಗಳು ಈವರೆಗೆ ವಾಪಸ್ ಬಂದಿವೆ' ಎಂದೂ ಹೇಳಿದೆ.
ಗ್ರಾಹಕರು ತಮ್ಮ ಬಳಿ ಇರುವ ₹ 2,000 ಮುಖಬೆಲೆಯ ನೋಟುಗಳನ್ನು ಎಲ್ಲ ಬ್ಯಾಂಕುಗಳಲ್ಲಿ ಬದಲಿಸಿಕೊಳ್ಳಲು ಅಥವಾ ಖಾತೆಗೆ ಜಮಾ ಮಾಡಿಕೊಳ್ಳಲು 2023ರ ಅಕ್ಟೋಬರ್ 7ರ ವರೆಗೆ ಅವಕಾಶವಿತ್ತು. ಇದೀಗ, ದೇಶದ 19 ಸ್ಥಳಗಳಲ್ಲಿರುವ ಆರ್‌ಬಿಐ ಕಚೇರಿಗಳಲ್ಲಿ ಮಾತ್ರವೇ ಈ ಸೌಲಭ್ಯವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.