
ನವದೆಹಲಿ: ‘ರೂಪಾಯಿ ಮೌಲ್ಯವನ್ನು ಇಂತಿಷ್ಟೇ ಮಟ್ಟದಲ್ಲಿ ಇರಿಸಬೇಕು ಎಂಬ ಗುರಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಹೊಂದಿಲ್ಲ’ ಎಂದು ಗವರ್ನರ್ ಸಂಜಯ್ ಮಲ್ಹೋತ್ರಾ ಗುರುವಾರ ತಿಳಿಸಿದ್ದಾರೆ.
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ಗೆ ಬೇಡಿಕೆ ಹೆಚ್ಚಳವಾಗಿದೆ. ಇದರಿಂದ ರೂಪಾಯಿ ಮೌಲ್ಯ ಡಾಲರ್ ಎದುರು ಇಳಿದಿದೆ. ರೂಪಾಯಿಗೆ ಬೇಡಿಕೆ ಹೆಚ್ಚಳವಾದರೆ, ಡಾಲರ್ ಮೌಲ್ಯ ಇಳಿದು ರೂಪಾಯಿ ಮೌಲ್ಯ ಏರಿಕೆಯಾಗಲಿದೆ ಎಂದು ಹೇಳಿದ್ದಾರೆ.
ವ್ಯಾಪಾರ ನಿಯಮಗಳು ಮತ್ತು ಅಮೆರಿಕದ ಹೆಚ್ಚುವರಿ ಸುಂಕವು ರೂಪಾಯಿ ಮೌಲ್ಯದ ಮೇಲೆ ಪರಿಣಾಮ ಬೀರಿವೆ ಎಂದು ಹೇಳಿದ್ದಾರೆ.
ಆರ್‌ಬಿಐ ಬಳಿ ಇರುವ ವಿದೇಶಿ ವಿನಿಮಯ ಮೀಸಲು ಸಂಗ್ರಹ ಅತ್ಯುತ್ತಮವಾಗಿದೆ ಎಂದು ಡೆಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ದೇಶದಲ್ಲಿ ಆರ್ಥಿಕ ಸ್ಥಿರತೆ ಕಾಪಾಡುವುದು ಆರ್‌ಬಿಐನ ಪ್ರಮುಖ ಆದ್ಯತೆ. ಇದಕ್ಕಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದರು.
ಅಮೆರಿಕದೊಂದಿಗೆ ಭಾರತದ ವ್ಯಾಪಾರ ಒಪ್ಪಂದವು ಉತ್ತಮವಾಗಿರುವ ವಿಶ್ವಾಸವಿದೆ. ಇದು ರೂಪಾಯಿಯ ಮೇಲೆ ಒತ್ತಡ ಕಡಿಮೆ ಮಾಡಲಿದೆ ಎಂದು ಹೇಳಿದ್ದಾರೆ.
ವಿಶ್ವದ ಪ್ರಮುಖ 100 ಬ್ಯಾಂಕ್‌ಗಳ ಪಟ್ಟಿಯಲ್ಲಿ ಎಸ್‌ಬಿಐ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಈಗಾಗಲೇ ಸ್ಥಾನ ಪಡೆದಿವೆ. ಅತಿ ಶೀಘ್ರದಲ್ಲಿ ಈ ಪಟ್ಟಿಯಲ್ಲಿ ದೇಶದ ಹಲವು ಬ್ಯಾಂಕ್‌ಗಳು ಸೇರಲಿವೆಸಂಜಯ್ ಮಲ್ಹೋತ್ರಾ ಆರ್‌ಬಿಐ ಗವರ್ನರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.