ADVERTISEMENT

ಸೆನ್ಸೆಕ್ಸ್ 145 ಅಂಶ ಏರಿಕೆ

ಪಿಟಿಐ
Published 16 ಆಗಸ್ಟ್ 2021, 16:23 IST
Last Updated 16 ಆಗಸ್ಟ್ 2021, 16:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದ ಷೇರುಪೇಟೆಗಳು ಸೋಮವಾರ ಹೊಸ ಎತ್ತರ ತಲುಪಿ ವಹಿವಾಟು ಅಂತ್ಯಗೊಳಿಸಿವೆ. ರಿಲಯನ್ಸ್‌, ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್‌ ಷೇರುಗಳು ಉತ್ತಮ ವಹಿವಾಟು ಕಂಡವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 145 ಅಂಶ ಹೆಚ್ಚಾಗಿ 55,582 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 34 ಅಂಶ ಹೆಚ್ಚಾಗಿ 16,563 ಅಂಶಗಳಿಗೆ ತಲುಪಿತು. ಸೆನ್ಸೆಕ್ಸ್‌ನಲ್ಲಿ ಟಾಟಾ ಸ್ಟೀಲ್‌ ಷೇರು ಶೇಕಡ 4ರಷ್ಟು ಗರಿಷ್ಠ ಗಳಿಕೆ ಕಂಡಿತು.

ಷೇರುಪೇಟೆ ವಹಿವಾಟು ಆರಂಭದಲ್ಲಿ ಮಂದಗತಿಯಲ್ಲಿತ್ತು. ಆ ಬಳಿಕ ರಿಲಯನ್ಸ್‌, ಲೋಹ ಹಾಗೂ ಹಣಕಾಸು ವಲಯಗಳ ಷೇರುಗಳು ಉತ್ತಮ ಖರೀದಿಗೆ ಒಳಗಾಗಿದ್ದರಿಂದ ಅಲ್ಪ ಏರಿಕೆಯೊಂದಿಗೆ ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯವಾಯಿತು ಎಂದು ರೆಲಿಗೇರ್‌ ಬ್ರೋಕಿಂಗ್‌ನ ಸಂಶೋಧನಾ ವಿಭಾಗದ ಉಪಾಧ್ಯಕ್ಷ ಅಜಿತ್‌ ಮಿಶ್ರಾ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.