ADVERTISEMENT

ಸೆನ್ಸೆಕ್ಸ್‌, ನಿಫ್ಟಿ ಶೇ 1ರವರೆಗೆ ಗಳಿಕೆ

ಪಿಟಿಐ
Published 12 ಅಕ್ಟೋಬರ್ 2022, 12:35 IST
Last Updated 12 ಅಕ್ಟೋಬರ್ 2022, 12:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಬ್ಯಾಂಕಿಂಗ್‌, ವಿದ್ಯುತ್‌ ಮತ್ತು ಐ.ಟಿ. ವಲಯದ ಷೇರುಗಳ ಗಳಿಕೆಯಿಂದಾಗಿ ದೇಶದ ಷೇರುಪೇಟೆಗಳ ಸೂಚ್ಯಂಕಗಳು ಬುಧವಾರ ಶೇಕಡ 1ರವರೆಗೂ ಏರಿಕೆ ಕಂಡವು. ಇದರಿಂದಾಗಿ ಮೂರು ದಿನಗಳ ನಕಾರಾತ್ಮಕ ಓಟಕ್ಕೆ ವಿರಾಮ ಬಿದ್ದಿತು.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 479 ಅಂಶ ಏರಿಕೆ ಕಂಡರೆ, ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 140 ಅಂಶ ಏರಿಕೆ ಆಯಿತು.

‘ಹೂಡಿಕೆದಾರರು ತ್ರೈಮಾಸಿಕ ಫಲಿತಾಂಶದ ಕಡೆಗೆ ಗಮನ ಹರಿಸಲು ಆರಂಭಿಸಿದ್ದಾರೆ. ಹೀಗಾಗಿ ಜಾಗತಿಕ ಷೇರುಪೇಟೆಗಳಲ್ಲಿನ ನಕಾರಾತ್ಮಕ ಚಲನೆಯು ದೇಶದ ಮಾರುಕಟ್ಟೆಗಳ ಮೇಲೆ ಹೆಚ್ಚು ಪರಿಣಾಮ ಬೀರಲಿಲ್ಲ’ ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ADVERTISEMENT

‘ಐ.ಟಿ. ವಲಯದ ತ್ರೈಮಾಸಿಕ ಫಲಿತಾಂಶವು ಉತ್ತಮ ಆರಂಭ ಕಂಡಿದೆ. ಇದರ ಜೊತೆಗೆ ಚೀನಾದಲ್ಲಿ ಆರ್ಥಿಕ ಹಿಂಜರಿತದ ಆತಂಕ ಉಂಟಾಗಿರುವುದರಿಂದ ತೈಲ ದರ ಇಳಿದಿದೆ. ಈ ಅಂಶಗಳು ಸಹ ಸಕಾರಾತ್ಮಕ ವಹಿವಾಟಿಗೆ ಕಾರಣವಾದವು’ ಎಂದು ಅವರು ತಿಳಿಸಿದ್ದಾರೆ.

ಏಷ್ಯಾದಲ್ಲಿ ಸೋಲ್‌ ಮತ್ತು ಶಾಂಘೈ ಮಾರುಕಟ್ಟೆಗಳು ಗಳಿಕೆ ಕಂಡರೆ, ಟೋಕಿಯೊ ಮತ್ತು ಹಾಂಕ್‌ಕಾಂಗ್ ಷೇರುಪೇಟೆಗಳ ವಹಿವಾಟು ಇಳಿಕೆ ಕಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.