ADVERTISEMENT

ಮಾರಾಟದ ಒತ್ತಡ: ಷೇರು ಸೂಚ್ಯಂಕಗಳು ಇಳಿಕೆ

ಪಿಟಿಐ
Published 26 ಮಾರ್ಚ್ 2024, 13:41 IST
Last Updated 26 ಮಾರ್ಚ್ 2024, 13:41 IST
......
......   

ಮುಂಬೈ: ರಿಲಯನ್ಸ್‌ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ ಬ್ಯಾಂಕ್‌ ಮತ್ತು ಐ.ಟಿ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದರಿಂದ ಷೇರು ಸೂಚ್ಯಂಕಗಳು ಮಂಗಳವಾರ ಇಳಿಕೆ ಕಂಡಿವೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 361 ಅಂಶ ಕುಸಿದು 72,470ಕ್ಕೆ ಸ್ಥಿರಗೊಂಡಿದೆ. ರಾಷ್ಟ್ರೀಯ ಷೇರು ಪೇಟೆ ಸೂಚ್ಯಂಕ ನಿಫ್ಟಿ 92 ಅಂಶ ಇಳಿಕೆ ಕಂಡು 22,004ಕ್ಕೆ ಅಂತ್ಯಗೊಂಡಿದೆ. 

ಪವರ್‌ಗ್ರಿಡ್‌, ಭಾರ್ತಿ ಏರ್‌ಟೆಲ್‌, ವಿಪ್ರೊ, ಇನ್ಫೊಸಿಸ್‌, ಟಿಸಿಎಸ್‌, ಕೋಟಕ್‌ ಮಹೀಂದ್ರ ಬ್ಯಾಂಕ್‌, ಅಲ್ಟ್ರಾಟೆಕ್‌ ಸಿಮೆಂಟ್‌ ಮತ್ತು ಏಷ್ಯನ್ ಪೇಂಟ್ಸ್‌ ಷೇರಿನ ಮೌಲ್ಯ ಇಳಿದಿದೆ. 

ADVERTISEMENT

ಬಜಾಜ್‌ ಫೈನಾನ್ಸ್‌, ಎನ್‌ಟಿಪಿಸಿ, ಲಾರ್ಸೆನ್‌ ಆ್ಯಂಡ್‌ ಟೊರ್ಬೊ, ಎಕ್ಸಿಸ್‌ ಬ್ಯಾಂಕ್‌, ಟಾಟಾ ಮೋಟರ್ಸ್‌, ಇಂಡಸ್‌ಇಂಡ್‌ ಬ್ಯಾಂಕ್‌ ಮತ್ತು ಬಜಾಜ್‌ ಫಿನ್‌ಸರ್ವ್‌ ಷೇರಿನ ಮೌಲ್ಯ ಏರಿಕೆ ಕಂಡಿವೆ.

ಜಾಗತಿಕ ಬ್ರೆಂಟ್‌ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ ಶೇ 0.17ರಷ್ಟು ಇಳಿದು 86.60 ಡಾಲರ್‌ಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.