ADVERTISEMENT

ರಿಲಯನ್ಸ್‌ ಗಳಿಕೆ: ಸೆನ್ಸೆಕ್ಸ್‌ 428 ಅಂಶ ಏರಿಕೆ

ಪಿಟಿಐ
Published 9 ಜೂನ್ 2022, 13:52 IST
Last Updated 9 ಜೂನ್ 2022, 13:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರು ಮೌಲ್ಯ ಗಳಿಕೆ ಕಂಡಿದ್ದರಿಂದ ದೇಶದ ಷೇರುಪೇಟೆಗಳ ನಾಲ್ಕು ದಿನಗಳ ನಕಾರಾತ್ಮಕ ವಹಿವಾಟಿಗೆ ಗುರುವಾರ ತಡೆ ಬಿದ್ದಿದೆ.

ಹೂಡಿಕೆದಾರರು ಐ.ಟಿ., ಫಾರ್ಮಾ ಮತ್ತು ಬ್ಯಾಂಕ್‌ ಷೇರುಗಳ ಖರೀದಿಗೆ ಹೆಚ್ಚಿನ ಗಮನ ನೀಡಿದರು. ಆದರೆ, ರೂಪಾಯಿ ಮೌಲ್ಯ ಇಳಿಕೆ ಮತ್ತು ವಿದೇಶಿ ಬಂಡವಾಳ ಹೊರಹರಿವು ಷೇರುಪೇಟೆಯ ಗಳಿಕೆಯನ್ನು ಮಿತಿಗೊಳಿಸಿದವು ಎಂದು ವರ್ತಕರು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 428 ಅಂಶ ಹೆಚ್ಚಾಗಿ 55,320 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 122 ಅಂಶ ಹೆಚ್ಚಾಗಿ 16,478 ಅಂಶಗಳಿಗೆ ತಲುಪಿತು.

ADVERTISEMENT

ವಾಹನ, ತೈಲ ಮತ್ತು ಅನಿಲ ವಲಯಗಳು ಉತ್ತಮ ವಹಿವಾಟು ನಡೆಸುತ್ತಿವೆ. ಆದರೆ, ಲೋಹ ವಲಯದ ವಹಿವಾಟು ಮಂದಗತಿಯಲ್ಲಿ ಮುಂದುವರಿಯಲಿದೆ ಎಂದು ರೆಲಿಗೇರ್‌ ಬ್ರೋಕಿಂಗ್‌ನ ಉಪಾಧ್ಯಕ್ಷ ಅಜಿತ್ ಮಿಶ್ರಾ ಹೇಳಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರ ಶೇ 0.13ರಷ್ಟು ಇಳಿಕೆ ಕಂಡು ಒಂದು ಬ್ಯಾರಲ್‌ಗೆ 123.42 ಡಾಲರ್‌ಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.