ADVERTISEMENT

ಸ್ವಿಗ್ಗಿಯ ತಾಂತ್ರಿಕ ತಂಡಕ್ಕೆ ಎಲ್ಲಿಂದಲಾದರೂ ಕೆಲಸ ಮಾಡಲು ಅವಕಾಶ

ಪಿಟಿಐ
Published 29 ಜುಲೈ 2022, 11:50 IST
Last Updated 29 ಜುಲೈ 2022, 11:50 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಸ್ವಿಗ್ಗಿ ಕಂಪನಿಯು ತನ್ನ ಉದ್ಯೋಗಿಗಳಿಗೆ ಎಲ್ಲಿಂದಲಾದರೂ ಕೆಲಸ ಮಾಡುವ ಕಾಯಂ ವ್ಯವಸ್ಥೆಯನ್ನು ಜಾರಿಗೆ ತರುವುದಾಗಿ ಶುಕ್ರವಾರ ಹೇಳಿದೆ.

ಕಾರ್ಪೊರೇಟ್‌ ವಹಿವಾಟಿಗೆ ಸಂಬಂಧಿತ ಕೆಲಸಗಳು ಮತ್ತು ತಾಂತ್ರಿಕ ಕೆಲಸಗಳ ತಂಡವು ಕಚೇರಿಗೇ ಬಂದು ಕೆಲಸ ಮಾಡಬೇಕು ಎಂಬುದೇನೂ ಇಲ್ಲ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಉದ್ಯೋಗಿಗಳ ನಡುವೆ ವೈಯಕ್ತಿಕ ಬಾಂಧವ್ಯ ಬೆಳೆಯಬೇಕು ಎಂಬ ಉದ್ದೇಶದಿಂದ ಪ್ರತಿ ತ್ರೈಮಾಸಿಕದಲ್ಲಿ ಒಂದು ವಾರ ಕಚೇರಿಯಿಂದ ಕೆಲಸ ಮಾಡಬೇಕು ಎಂದು ಹೇಳಿದೆ.

ADVERTISEMENT

ಕಳೆದ ಎರಡು ವರ್ಷಗಳಲ್ಲಿ ಮನೆಯಿಂದ ಕೆಲಸ ಮಾಡುವ ಅವಕಾಶ ಕಲ್ಪಿಸಿದ್ದರಿಂದ ಉತ್ಪಾದಕತೆಯಲ್ಲಿ ಹೆಚ್ಚಳ ಆಗಿದೆ. ಹೀಗಾಗಿ ಎಲ್ಲಿಂದಲಾದರೂ ಕೆಲಸ ಮಾಡಲು ಅವಕಾಶ ನೀಡುವಂತೆ ಹಲವು ವ್ಯವಸ್ಥಾಪಕರು ಮತ್ತು ಉದ್ಯೋಗಿಗಳು ಕೋರಿದ್ದರು ಎಂದು ಕಂಪನಿ ತಿಳಿಸಿದೆ.

ಕಂಪನಿಯು ಸದ್ಯ 27 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳ 487 ನಗರಗಳಲ್ಲಿ ಒಟ್ಟಾರೆ ಐದು ಸಾವಿರ ಕೆಲಸಗಾರರನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.