
ನವದೆಹಲಿ: 2025ರಲ್ಲಿ ದೇಶದ ಏಳು ಪ್ರಮುಖ ನಗರಗಳಲ್ಲಿ ಮಾರಾಟವಾಗದೆ ಉಳಿದ ಮನೆಗಳ ಸಂಖ್ಯೆ 5.77 ಲಕ್ಷ ಎಂದು ಆಸ್ತಿ ಸಲಹಾ ಸಂಸ್ಥೆ ಅನರಾಕ್ ವರದಿ ಹೇಳಿದೆ.
ಇದೇ ಅವಧಿಯಲ್ಲಿ ಬೆಂಗಳೂರಿನಲ್ಲಿ ಮಾರಾಟವಾಗದೆ ಉಳಿದ ಮನೆಗಳ ಪ್ರಮಾಣ ಶೇ 23ರಷ್ಟು ಹೆಚ್ಚಳವಾಗಿದೆ.
2024ರ ಕ್ಯಾಲೆಂಡರ್ ವರ್ಷದಲ್ಲಿ ದೇಶದ ಏಳು ಪ್ರಮುಖ ನಗರಗಳಲ್ಲಿ ಮಾರಾಟವಾಗದೆ ಉಳಿದಿದ್ದ ಮನೆಗಳ ಸಂಖ್ಯೆ 5.53 ಲಕ್ಷ ಆಗಿತ್ತು. ಕಳೆದ ವರ್ಷ ಈ ಸಂಖ್ಯೆಯು 5.76 ಲಕ್ಷಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಮನೆಗಳ ಬೇಡಿಕೆಯು ಮಂದಗತಿಗೆ ತಿರುಗಿದೆ, ಹೊಸ ಮನೆಗಳ ಪೂರೈಕೆಯಲ್ಲಿ ಹೆಚ್ಚಳ ಆಗಿದೆ. ಇವು ಮನೆಗಳು ಮಾರಾಟವಾಗದೇ ಉಳಿಯಲು ಕಾರಣ ಎಂದು ವರದಿ ತಿಳಿಸಿದೆ.
ಮುಂಬೈ ಮಹಾನಗರ ಪ‍್ರದೇಶ (ಎಂಎಂಆರ್) ಮತ್ತು ಹೈದರಾಬಾದ್‌ನಲ್ಲಿ ಮಾರಾಟವಾಗದ ಮನೆಗಳ ಪ್ರಮಾಣ ಇಳಿಕೆಯಾಗಿದೆ, ದೆಹಲಿ–ಎನ್‌ಸಿಆರ್, ಪುಣೆ, ಚೆನ್ನೈ, ಬೆಂಗಳೂರು ಮತ್ತು ಕೋಲ್ಕತ್ತದಲ್ಲಿ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಮಾರಾಟವಾಗದೆ ಉಳಿದ ಮನೆಗಳ ಸಂಖ್ಯೆಯು 64,863ಕ್ಕೆ ಏರಿಕೆ ಆಗಿದೆ. 2024ರಲ್ಲಿ ಇದು 52,807 ಆಗಿತ್ತು. ಪುಣೆ (ಶೇ 3), ಚೆನ್ನೈ (ಶೇ 18) ಮತ್ತು ಕೋಲ್ಕತ್ತದಲ್ಲಿ ಮಾರಾಟವಾಗದೇ ಉಳಿದ ಮನೆಗಳ ಪ್ರಮಾಣ ಶೇ 9ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.