ಷೇರು (ಸಾಂದರ್ಭಿಕ ಚಿತ್ರ)
ಆ್ಯಂಬರ್ ಎಂಟರ್‌ಪ್ರೈಸಸ್ ಕಂಪನಿಯ ಷೇರು ಮೌಲ್ಯವು ₹9,000ಕ್ಕೆ ತಲುಪಬಹುದು ಎಂದು ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್ ಅಂದಾಜು ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜಿಎಸ್‌ಟಿ ವ್ಯವಸ್ಥೆಯಲ್ಲಿ ಸುಧಾರಣೆ ತರುವುದಾಗಿ ಆಗಸ್ಟ್ 15ರಂದು ಹೇಳಿದ್ದಾರೆ, ಪ್ರಸ್ತಾವಿತ ಸುಧಾರಣೆಯು ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚು ಮಾಡಲಿದೆ ಎಂದು ಸಂಸ್ಥೆ ಹೇಳಿದೆ.
ಹವಾನಿಯಂತ್ರಕಗಳ ಪ್ರಮುಖ ಪೂರೈಕೆದಾರ ಕಂಪನಿಯಾದ ಆ್ಯಂಬರ್ ಎಂಟರ್‌ಪ್ರೈಸಸ್, ಎ.ಸಿಗಳ ಮೇಲಿನ ತೆರಿಗೆಯ ಪ್ರಮಾಣವು ಶೇ 28 ಇರುವುದನ್ನು ಶೇ 18ಕ್ಕೆ ಇಳಿಕೆ ಮಾಡಿದರೆ ಅವುಗಳ ಬೇಡಿಕೆಯಲ್ಲಿ ಆಗುವ ಹೆಚ್ಚಳದ ಪ್ರಯೋಜನ ಪಡೆಯಲಿದೆ. ಎ.ಸಿ ಹಾಗೂ ಗ್ರಾಹಕ ಬಳಕೆ ಉಪಕರಣಗಳ ಮಾರುಕಟ್ಟೆಯಲ್ಲಿ ಕಂಪನಿಯು ಹೆಚ್ಚಿನ ಗ್ರಾಹಕರನ್ನು ಪಡೆದುಕೊಳ್ಳುತ್ತಿದೆ. ಕಂಪನಿಯು ಗ್ರಾಹಕ ಬಳಕೆ ಉಪಕರಣಗಳ ವಿಭಾಗದಲ್ಲಿ ಸುಸ್ಥಿರ ಬೆಳವಣಿಗೆ ಕಾಣಲಿದೆ ಎಂದು ಬ್ರೋಕರೇಜ್ ಸಂಸ್ಥೆ ಹೇಳಿದೆ.
ಕಂಪನಿಯ ವರಮಾನ ಹಾಗೂ ತೆರಿಗೆ ನಂತರ ಲಾಭದ ಸಂಯುಕ್ತ ವಾರ್ಷಿಕ ಬೆಳವಣಿಗೆ ಪ್ರಮಾಣವು 2024–25ರಿಂದ 2027–28ರವರೆಗೆ ಕ್ರಮವಾಗಿ ಶೇ 24ರಷ್ಟು ಹಾಗೂ ಶೇ 54ರಷ್ಟು ಇರಲಿದೆ ಎಂದು ಸಂಸ್ಥೆ ಅಂದಾಜು ಮಾಡಿದೆ. ಬುಧವಾರದ ವಹಿವಾಟಿನ ಅಂತ್ಯಕ್ಕೆ ಷೇರಿನ ಮೌಲ್ಯವು ₹7,375 ಆಗಿತ್ತು.
(ಬ್ರೋಕರೇಜ್ ಕಂಪನಿಗಳು ನೀಡುವ ಮಾಹಿತಿ, ವಿವರಗಳಿಗೆ ಪತ್ರಿಕೆ ಹೊಣೆಯಲ್ಲ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.