ADVERTISEMENT

ರಿಲಯನ್ಸ್‌ ಷೇರು ಶೇ 13 ಕುಸಿತ: ಒಂದೇ ದಿನ ಕರಗಿತು ₹1.08 ಲಕ್ಷ ಕೋಟಿ 

ಏಜೆನ್ಸೀಸ್
Published 9 ಮಾರ್ಚ್ 2020, 10:16 IST
Last Updated 9 ಮಾರ್ಚ್ 2020, 10:16 IST
ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌
ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌   

ಬೆಂಗಳೂರು:ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಇಳಿಕೆಯಾಗಿದ್ದು, ಅದರ ಪರಿಣಾಮಕಚ್ಚಾ ತೈಲ ಶೋಧ ಮತ್ತು ಸಂಸ್ಕರಣೆ ನಡೆಸುವ ಕಂಪನಿಗಳ ಷೇರುಗಳು ಮಹಾ ಕುಸಿತಕ್ಕೆ ಒಳಗಾಗಿವೆ. ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಷೇರು ಶೇ 12 ಮತ್ತು ಒಎನ್‌ಜಿಸಿ ಷೇರು ಶೇ 15ರಷ್ಟು ಇಳಿಮುಖವಾಗಿವೆ.

ಜಾಮ್‌ನಗರದಲ್ಲಿ ಜಗತ್ತಿನ ಅತಿ ದೊಡ್ಡ ಕಚ್ಚಾ ತೈಲ ಶುದ್ಧೀಕರಣ ಘಟಕ ಮತ್ತು ಕೃಷ್ಣ ಗೋದಾವರಿ ತೀರದಲ್ಲಿKG-D6 ಅನಿಲ ಶೋಧ ಘಟಕಗಳನ್ನು ಹೊಂದಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರು ಸೋಮವಾರ ಶೇ 13.02ರಷ್ಟು ಇಳಿಕೆ ಕಂಡಿತು. ಕಳೆದ 10 ವರ್ಷಗಳಲ್ಲಿ ಒಂದೇ ದಿನದಲ್ಲಿ ದಾಖಲಾದ ಗರಿಷ್ಠ ಕುಸಿತ ಇದಾಗಿದ್ದು, ಪ್ರತಿ ಷೇರು ಬೆಲೆ₹1,105 ತಲುಪಿದೆ.

ರಿಲಯನ್ಸ್‌ ಇಂಡಸ್ಟ್ರೀಸ್‌ ಮಾರುಕಟ್ಟೆ ಮೌಲ್ಯ ಟಿಸಿಎಸ್‌ ಕಂಪನಿಗಿಂತಲೂ ಕಡಿಮೆಯಾಗಿದ್ದು, ₹6.97 ಲಕ್ಷ ಕೋಟಿ ತಲುಪಿದೆ. ರಿಲಯನ್ಸ್‌ ಷೇರುದಾರರುಒಂದೇ ದಿನದಲ್ಲಿ ₹1.08 ಲಕ್ಷ ಕೋಟಿ ಸಂಪತ್ತು ಕಳೆದುಕೊಂಡಿದ್ದಾರೆ. ಟಿಸಿಎಸ್‌ ಮಾರುಕಟ್ಟೆ ಮೌಲ್ಯ ₹7.31 ಲಕ್ಷ ಕೋಟಿ ಇದೆ.

ADVERTISEMENT

ಶೇ 15ರಷ್ಟು ಇಳಿಕೆಯಾಗಿರುವ ಒಎನ್‌ಜಿಸಿ ಷೇರು ಬೆಲೆ ₹75.05 ಆಗಿದೆ.

ಕಚ್ಚಾ ತೈಲ ದರ ಇಳಿಕೆ ಮಾಡುವ ಮೂಲಕ ರಷ್ಯಾದೊಂದಿಗೆ ಸೌದಿ ಅರೇಬಿಯಾ ದರ ಸಮರ ನಡೆಸುತ್ತಿದೆ. ಇದರ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ 1991ರ ನಂತರದಲ್ಲಿ ಅತಿ ಹೆಚ್ಚು ಕುಸಿತ ಕಂಡಿದೆ. ಬ್ರೆಂಟ್‌ ಕ್ರ್ಯೂಡ್‌ ಫ್ಯೂಚರ್ಸ್‌ ಪ್ರತಿ ಬ್ಯಾರೆಲ್‌ಗೆ ಶೇ 31.5ರಷ್ಟು ಇಳಿಕೆಯಾಗಿದೆ.

ಇದರೊಂದಿಗೆ ಕೊರೊನಾ ವೈರಸ್‌ ವ್ಯಾಪಿಸುತ್ತಿರುವ ಆತಂಕವೂ ಜೊತೆಯಾಗಿ ಹೂಡಿಕೆದಾರರಲ್ಲಿ ಮಾರಾಟದ ಮನಸ್ಥಿತಿ ಸೃಷ್ಟಿಯಾಗಿದೆ. ಸೆನ್ಸೆಕ್ಸ್‌ 2000 ಅಂಶ ಕುಸಿಯುವ ಮೂಲಕ 35,500 ಅಂಶಗಳಿಗೆ ಸಮೀಪಿಸಿದೆ. ನಿಫ್ಟಿ ಶೇ 5 (555 ಅಂಶ) ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.