ADVERTISEMENT

ಷೇರುಪೇಟೆಯಲ್ಲಿ ಮತ್ತೆ ತಲ್ಲಣ: ಮಹಾ ಕುಸಿತ ತಪ್ಪಿಸಿದ ಐಟಿ, ಫಾರ್ಮಾ ಷೇರು ಖರೀದಿ

ಏಜೆನ್ಸೀಸ್
Published 4 ಮಾರ್ಚ್ 2020, 11:33 IST
Last Updated 4 ಮಾರ್ಚ್ 2020, 11:33 IST
ಷೇರುಪೇಟೆಯಲ್ಲಿ ಮತ್ತೆ ಮಾರಾಟ ಒತ್ತಡ
ಷೇರುಪೇಟೆಯಲ್ಲಿ ಮತ್ತೆ ಮಾರಾಟ ಒತ್ತಡ   

ಬೆಂಗಳೂರು: ಭಾರತದಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ 28ಕ್ಕೆ ಏರಿಕೆಯಾಗಿರುವುದು ವರದಿಯಾಗುತ್ತಿದ್ದಂತೆ ಷೇರುಪೇಟೆ ಮತ್ತೆ ಇಳಿಮುಖವಾಯಿತು. ದಿನದ ವಹಿವಾಟು ಅಂತ್ಯಕ್ಕೆ ಸೆನ್ಸೆಕ್ಸ್ 214 ಅಂಶ ಇಳಿಕೆ ಕಂಡಿತು.

ಕೊರೊನಾ ಪ್ರಕರಣ ಹೆಚ್ಚುತ್ತಿರುವುದು ಹೂಡಿಕೆದಾರರಲ್ಲಿ ಭೀತಿ ಸೃಷ್ಟಿಸಿದಿದೆ. ಬುಧವಾರ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 778 ಅಂಶಗಳ ವರೆಗೂ ಇಳಿಕೆಯಾಗಿ, 37,846 ಅಂಶ ಮುಟ್ಟಿತ್ತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 11,100 ಅಂಶಗಳಿಗೂ ಕಡಿಮೆಯಾಗಿತ್ತು. ಆದರೆ, ಮಾಹಿತಿ ತಂತ್ರಜ್ಞಾನ ಮತ್ತು ಫಾರ್ಮಾ ಕಂಪನಿ ಷೇರುಗಳ ಖರೀದಿ ಹೆಚ್ಚಿದ್ದರಿಂದ ದಿನದ ಅಂತ್ಯಕ್ಕೆ ಸೆನ್ಸೆಕ್ಸ್‌ 241 ಅಂಶ ಇಳಿಕೆಯೊಂದಿಗೆ 38,409 ಹಾಗೂ ನಿಫ್ಟಿ 52 ಅಂಶ ಕುಸಿದು 11,251 ಅಂಶ ತಲುಪಿತು.

ಎಚ್‌ಡಿಎಫ್‌ಸಿ ಬ್ಯಾಂಕ್‌ ಲಿಮಿಟೆಡ್‌ ಷೇರುಶೇ 2.8ರಷ್ಟು ಕುಸಿತ ಕಂಡಿದೆ. ಐಟಿಸಿ ಷೇರು ಶೇ 3.3ರಷ್ಟು ಇಳಿಕೆಯಾಗಿದೆ. ಇಂದಿನ ವಹಿವಾಟಿನಲ್ಲಿ ಮತ್ತೊಂದು ಮಹಾ ಕುಸಿತ ತಪ್ಪಲು ಐಟಿ ಮತ್ತು ಫಾರ್ಮಾ ಷೇರುಗಳು ಕಾರಣವಾದವು. ಇನ್ಫೊಸಿಸ್‌ ಷೇರು ಶೇ 1.6 ಮತ್ತು ಟಿಸಿಎಸ್‌ ಷೇರು ಶೇ 2.3ರಷ್ಟು ಏರಿಕೆ ದಾಖಲಿಸಿತು. ಸನ್‌ಫಾರ್ಮಾ, ಡಾ.ರೆಡ್ಡೀಸ್‌ ಲ್ಯಾಬೊರೇಟರೀಸ್‌ ಹಾಗೂ ಸಿಪ್ಲಾ ಕಂಪನಿ ಷೇರುಗಳು ಶೇ 3–5.4ರಷ್ಟು ಹೆಚ್ಚಳಗೊಂಡವು.

ADVERTISEMENT

ಹೂಡಿಕೆ ತಜ್ಞರ ಪ್ರಕಾರ, ಹೂಡಿಕೆದಾರರು ಇನ್ನಷ್ಟು ಹೆಚ್ಚುವರಿ ಷೇರು ಖರೀದಿಗೆ ಇದು ಸಕಾಲ. ಉತ್ತಮ ಬೆಳವಣಿಗೆ ಇರುವ ಕಂಪನಿಗಳ ಷೇರುಗಳು ಕಡಿಮೆ ಬೆಲೆಯಲ್ಲಿ ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.