ADVERTISEMENT

ಷೇರುಪೇಟೆ: ಸತತ ಮೂರನೆಯ ದಿನವೂ ಮುಂದುವರಿದ ಕುಸಿತ

ಪಿಟಿಐ
Published 19 ಏಪ್ರಿಲ್ 2023, 16:24 IST
Last Updated 19 ಏಪ್ರಿಲ್ 2023, 16:24 IST
   

ಮುಂಬೈ: ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಸತತ ಮೂರನೆಯ ದಿನವೂ ಇಳಿಕೆ ದಾಖಲಿಸಿವೆ. ಐ.ಟಿ. ಮತ್ತು ಕೆಲವು ಬ್ಯಾಂಕಿಂಗ್ ಷೇರುಗಳ ಮಾರಾಟ ಹೆಚ್ಚಾಗಿದ್ದುದು ಸೂಚ್ಯಂಕಗಳ ಇಳಿಕೆಗೆ ಕಾರಣವಾಗಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹಣವನ್ನು ಹಿಂಪಡೆದಿದ್ದು ಕೂಡ ಇಳಿಕೆಗೆ ಒಂದು ಕಾರಣ.

ಸೆನ್ಸೆಕ್ಸ್ 159 ಅಂಶ, ನಿಫ್ಟಿ 41 ಅಂಶ ಇಳಿಕೆ ಕಂಡಿವೆ. ಮೂರು ದಿನಗಳಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸರಿಸುಮಾರು ಶೇ 1.4ರಷ್ಟು ಇಳಿಕೆ ಕಂಡಿವೆ. ‘ಮಾರ್ಚ್‌ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಹಣಕಾಸಿನ ಸಾಧನೆ ಚೆನ್ನಾಗಿಲ್ಲದಿರುವುದು ಮಾರುಕಟ್ಟೆಗಳನ್ನು ಕಾಡುತ್ತಿದೆ’ ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT