ADVERTISEMENT

ಷೇರುಪೇಟೆ ಸೂಚ್ಯಂಕ: ಸೆನ್ಸೆಕ್ಸ್ 295 ಅಂಶ ಕುಸಿತ

ಪಿಟಿಐ
Published 18 ನವೆಂಬರ್ 2025, 5:19 IST
Last Updated 18 ನವೆಂಬರ್ 2025, 5:19 IST
<div class="paragraphs"><p>ಷೇರುಪೇಟೆ (ಸಾಂದರ್ಭಿಕ ಚಿತ್ರ)</p></div>

ಷೇರುಪೇಟೆ (ಸಾಂದರ್ಭಿಕ ಚಿತ್ರ)

   

ಮುಂಬೈ: ದೇಶದ ಷೇರುಪೇಟೆ ಸೂಚ್ಯಂಕಗಳು ಇಂದು (ಮಂಗಳವಾರ) ಆರಂಭಿಕ ವಹಿವಾಟಿನಲ್ಲಿ ಇಳಿಕೆ ಕಂಡಿವೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 295 ಅಂಶ ಇಳಿಕೆಯಾಗಿ, 84,658ಕ್ಕೆ ತಲುಪಿವೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 83 ಅಂಶ ಕಡಿಮೆಯಾಗಿ, 25,930ಕ್ಕೆ ಕುಸಿದಿವೆ.

ADVERTISEMENT

ಟಾಟಾ ಸ್ಟೀಲ್, ಬಜಾಜ್ ಫೈನಾನ್ಸ್, ಬಜಾಜ್ ಫಿನ್‌ಸರ್ವ್, ಟೆಕ್ ಮಹೀಂದ್ರಾ, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಲಾರ್ಸನ್ ಆ್ಯಂಡ್ ಟೊಬ್ರೊ ಷೇರಿನ ಮೌಲ್ಯ ಕುಸಿತ ಕಂಡಿದೆ.

ಭಾರತ್ ಎಲೆಕ್ಟ್ರಾನಿಕ್ಸ್, ಭಾರ್ತಿ ಏರ್‌ಟೆಲ್, ಎಕ್ಸಿಸ್‌ ಬ್ಯಾಂಕ್‌ ಮತ್ತು ಅದಾನಿ ಪೋರ್ಟ್ಸ್ ಷೇರಿನ ಮೌಲ್ಯ ಏರಿಕೆಯಾಗಿದೆ ಎಂದು ವರದಿಯಾಗಿದೆ.

ಏಷ್ಯಾದ ಮಾರುಕಟ್ಟೆಯಲ್ಲಿ ದಕ್ಷಿಣ ಕೊರಿಯಾ ಮತ್ತು ಜಪಾನ್‌ ನಕಾರಾತ್ಮಕ ವಹಿವಾಟು ಕಂಡಿವೆ. ಶಾಂಘೈ ಮತ್ತು ಹಾಂಗ್‌ಕಾಂಗ್‌ ಸೂಚ್ಯಂಕಗಳು ತೀವ್ರವಾಗಿ ಇಳಿಕೆ ಕಂಡಿವೆ.

ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರವು ಶೇ 0.47ರಷ್ಟು ಇಳಿಕೆಯಾಗಿದೆ. ಪ್ರತೀ ಬ್ಯಾರಲ್ ದರವು 63.90 ಡಾಲರ್ ಆಗಿದೆ.

ಸೆನ್ಸೆಕ್ಸ್, 388.17 ಪಾಯಿಂಟ್‌ಗಳು ಅಥವಾ ಶೇ. 0.46 ರಷ್ಟು ಏರಿಕೆಯಾಗಿ 84,950.95 ಕ್ಕೆ ತಲುಪಿದೆ. ನಿಫ್ಟಿ 103.40 ಪಾಯಿಂಟ್‌ಗಳು ಅಥವಾ ಶೇ. 0.40 ರಷ್ಟು ಏರಿಕೆಯಾಗಿ 26,013.45 ಕ್ಕೆ ತಲುಪಿದೆ.

ಸೋಮವಾರ ಸತತ ಆರನೇ ದಿನವೂ ಏರಿಕೆ ಕಂಡಿದ್ದ ಸೆನ್ಸೆಕ್ಸ್ 388 ಅಂಶ ಹೆಚ್ಚಳವಾಗಿ, 84,950ಕ್ಕೆ ವಹಿವಾಟು ಕೊನೆಗೊಂಡಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 103 ಅಂಶ ಏರಿಕೆಯಾಗಿ, 26,013ಕ್ಕೆ ಅಂತ್ಯಗೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.