ADVERTISEMENT

ಷೇರುಪೇಟೆಯಲ್ಲಿ 5ನೇ ದಿನವೂ ಸಕಾರಾತ್ಮಕ ವಹಿವಾಟು: ಸೆನ್ಸೆಕ್ಸ್ 213 ಅಂಶ ಏರಿಕೆ

ಪಿಟಿಐ
Published 20 ಆಗಸ್ಟ್ 2025, 11:22 IST
Last Updated 20 ಆಗಸ್ಟ್ 2025, 11:22 IST
ಷೇರುಪೇಟೆ ಸೂಚ್ಯಂಕ
ಷೇರುಪೇಟೆ ಸೂಚ್ಯಂಕ   

ಮುಂಬೈ: ಐ.ಟಿ ಮತ್ತು ಎಫ್‌ಎಂಸಿಜಿ ವಲಯದ ಕಂಪನಿಗಳ ಷೇರುಗಳ ಖರೀದಿ ಹೆಚ್ಚಳದಿಂದ ದೇಶದ ಷೇರುಪೇಟೆ ಸೂಚ್ಯಂಕಗಳು ಬುಧವಾರದ ವಹಿವಾಟಿನಲ್ಲಿ ಏರಿಕೆ ಕಂಡಿವೆ. 

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 213 ಅಂಶ ಹೆಚ್ಚಳವಾಗಿ, 81,857ಕ್ಕೆ ವಹಿವಾಟು ಅಂತ್ಯಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 68 ಅಂಶ ಏರಿಕೆಯಾಗಿ, 25,050ಕ್ಕೆ ಕೊನೆಗೊಂಡಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರವು ಶೇ 1.14ರಷ್ಟು ಹೆಚ್ಚಳವಾಗಿದೆ. ಪ್ರತೀ ಬ್ಯಾರೆಲ್ ದರವು 66.54 ಡಾಲರ್ ಆಗಿದೆ.

ADVERTISEMENT

‘ಸದೃಢವಾಗಿರುವ ದೇಶೀ ಹೂಡಿಕೆ ಮತ್ತು ಅನುಕೂಲಕರವಾದ ಮಾರುಕಟ್ಟೆ ಅಂಶಗಳು ಸೂಚ್ಯಂಕಗಳ ಏರಿಕೆಗೆ ನೆರವಾದವು. ಆದರೂ, ಅಮೆರಿಕದ ಸುಂಕ ಹೇರಿಕೆ, ರಷ್ಯಾದ ಕಚ್ಚಾ ತೈಲ ಖರೀದಿ ಮೇಲಿನ ನಿರ್ಬಂಧಗಳು ಸವಾಲಾಗಿವೆ’ ಎಂದು ಜಿಯೊಜಿತ್ ಇನ್ವೆಸ್ಟ್‌ಮೆಂಟ್‌ ಲಿಮಿಟೆಡ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.