ADVERTISEMENT

ಸೋಮವಾರ ಷೇರುಪೇಟೆಯಲ್ಲಿ ವಹಿವಾಟು ಚೇತರಿಕೆ; ಲೋಹ ವಲಯದ ಷೇರುಗಳು ಏರಿಕೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2019, 6:14 IST
Last Updated 25 ನವೆಂಬರ್ 2019, 6:14 IST
ಷೇರುಪೇಟೆ ಸಂವೇದಿ ಸೂಚ್ಯಂಕ
ಷೇರುಪೇಟೆ ಸಂವೇದಿ ಸೂಚ್ಯಂಕ    

ಬೆಂಗಳೂರು: ಅಮೆರಿಕ–ಚೀನಾ ನಡುವಿನ ವಾಣಿಜ್ಯ ಮಾತುಕತೆ ಸಕಾರಾತ್ಮಕ ಬೆಳವಣಿಗೆ ಕಂಡಿರುವುದು ಭಾರತದ ಷೇರುಪೇಟೆಗಳಲ್ಲಿ ಸೋಮವಾರ ವಹಿವಾಟು ಚೇತರಿಕೆಗೆ ಕಾರಣವಾಗಿದೆ. ಲೋಹ ಮತ್ತು ರಿಯಲ್‌ ಎಸ್ಟೇಲ್‌ ಷೇರುಗಳು ಏರಿಕೆ ದಾಖಲಿಸಿವೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಶೇ 0.64 ಏರಿಕೆಯೊಂದಿಗೆ 40,617 ಅಂಶಗಳನ್ನು ತಲುಪಿದರೆ, ರಾಷ್ಟ್ರೀಯ ಸಂವೇದಿ ಸೂಚ್ಯಂಕ ಶೇ 0.67 ಹೆಚ್ಚಳದೊಂದಿಗೆ11,993 ಅಂಶಗಳಲ್ಲಿ ವಹಿವಾಟು ನಡೆದಿದೆ. ಜೆಎಸ್‌ಡಬ್ಯು ಸ್ಟೀಲ್‌ ಮತ್ತು ಟಾಟಾ ಸ್ಟೀಲ್‌ ಷೇರುಗಳು ಶೇ 2.5ರಷ್ಟು ಗಳಿಕೆ ಕಂಡಿವೆ.

ಕಳೆದ ವಾರ ಭಾರೀ ಏರಿಕೆ ಕಂಡಿದ್ದ ಜೀ ಎಂಟರ್‌ಟೈನ್‌ಮೆಂಟ್‌ ಷೇರು ಶೇ 2.69ರಷ್ಟು ಕುಸಿದಿದೆ. ಭಾರ್ತಿ ಏರ್‌ಟೆಲ್‌ ಶೇ 2.30, ಇನ್ಫೋಸಿಸ್‌ ಶೇ 1.33, ಸನ್‌ ಫಾರ್ಮಾ ಶೇ 1.55, ವೇದಾಂತ ಶೇ 1.27 ಹಾಗೂ ಆರ್‌ಐಎಲ್‌ ಷೇರುಗಳು ಶೇ 0.82ರಷ್ಟು ಹೆಚ್ಚಳ ದಾಖಲಿಸಿವೆ.

ಬಜಾಜ್‌ ಆಟೊ ಶೇ 0.76, ಐಸಿಐಸಿಐ ಬ್ಯಾಂಕ್‌ ಶೇ 0.75, ಎಚ್‌ಸಿಎಲ್‌ ಟೆಕ್‌ ಶೇ 0.70, ಏಷಿಯನ್‌ ಪೇಯಿಂಟ್ಸ್‌ ಶೇ 0.59 ಹಾಗೂ ಒಎನ್‌ಜಿಸಿ ಷೇರುಗಳು ಶೇ 0.60ರಷ್ಟು ಕುಸಿದಿವೆ.ಶುಕ್ರವಾರ ಸೆನ್ಸೆಕ್ಸ್ 40,395 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ್ದರೆ, ನಿಫ್ಟಿ 11,914 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.