ADVERTISEMENT

ಪಶ್ಚಿಮ ಏಷ್ಯಾ ಬಿಕ್ಕಟ್ಟು: ಸೆನ್ಸೆಕ್ಸ್, ನಿಫ್ಟಿ ತೀವ್ರ ಕುಸಿತ, ತೈಲ ಬೆಲೆ ಏರಿಕೆ

ಪಿಟಿಐ
Published 2 ಮಾರ್ಚ್ 2026, 4:46 IST
Last Updated 2 ಮಾರ್ಚ್ 2026, 4:46 IST
<div class="paragraphs"><p>ಷೇರು ಮಾರುಕಟ್ಟೆ</p></div>

ಷೇರು ಮಾರುಕಟ್ಟೆ

   

ಮುಂಬೈ: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯಿಂದ ಕಚ್ಚಾ ತೈಲ ಬೆಲೆ ಏರಿಕೆಯಾಗಿ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಷೇರುಪೇಟೆ ತೀವ್ರ ಕುಸಿತ ಕಂಡಿದೆ.

ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 2,743.46 ಅಂಕ (ಶೇ3.37) ಕುಸಿದು 78,543.73 ಕ್ಕೆ ತಲುಪಿದೆ. ನಿಫ್ಟಿ 533.55 ಅಂಕ (ಶೇ 2.11) ಕುಸಿದು 24,645.10 ಕ್ಕೆ ತಲುಪಿದೆ.

ADVERTISEMENT

ಸೆನ್ಸೆಕ್ಸ್ ಪಟ್ಟಿಯಲ್ಲಿ ಇಂಟರ್ ಗ್ಲೋಬ್ ಏವಿಯೇಷನ್, ಲಾರ್ಸೆನ್ ಅಂಡ್ ಟೂಬ್ರೊ, ಎಟರ್ನಲ್, ಅದಾನಿ ಪೋರ್ಟ್ಸ್, ಏಷ್ಯನ್ ಪೇಂಟ್ಸ್, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಅತಿ ಹೆಚ್ಚು ನಷ್ಟ ಅನುಭವಿಸಿವೆ. ಭಾರತ್ ಎಲೆಕ್ಟ್ರಾನಿಕ್ಸ್ ಷೇರು ಮೌಲ್ಯ ಮಾತ್ರ ಏರಿಕೆ ಕಂಡಿದೆ.

ಜಾಗತಿಕ ತೈಲ ಮಾನದಂಡ ಬ್ರೆಂಟ್ ಕ್ರೂಡ್ ಬೆಲೆಯು ಶೇ 5.38 ರಷ್ಟು ಇಳಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 76.79 ಅಮೆರಿಕನ್ ಡಾಲರ್‌ಗೆ ತಲುಪಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.