ADVERTISEMENT

ಸಮಯಕ್ಕೆ ತಕ್ಕಂತೆ ಬಣ್ಣ ಬದಲಿಸುತ್ತೆ ಈ ಶಿವಲಿಂಗ: ಎಲ್ಲಿದೆ, ಏನಿದರ ವಿಶೇಷತೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಡಿಸೆಂಬರ್ 2025, 8:01 IST
Last Updated 15 ಡಿಸೆಂಬರ್ 2025, 8:01 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಚಿತ್ರ:ಗೆಟ್ಟಿ

ಭಾರತದಲ್ಲಿ ಲಕ್ಷಾಂತರ ದೇವಾಲಯಗಳಿವೆ. ರಾಜರ ಕಾಲದಲ್ಲಿ ನಿರ್ಮಾಣಗೊಂಡಿರುವ ಅನೇಕ  ದೇವಾಲಯಗಳು ಇಂದಿಗೂ ವಿಜ್ಞಾನ ಜಗತ್ತಿಗೆ ಅಚ್ಚರಿಯಾಗಿ ಉಳಿದಿವೆ. ಅಂತಹ ದೇವಾಲಯಗಳ ಪೈಕಿ ರಾಜಸ್ಥಾನದ ಧೋಲ್ಪುರದಲ್ಲಿರುವ ಅಚಲೇಶ್ವರ ಮಹಾದೇವ ದೇವಾಲಯ ಒಂದು. 

ADVERTISEMENT

ಶಿಲ್ಪಿಗಳ ಕೈಚಳಕಕ್ಕೆ ಈ ದೇವಾಲಯ ಉತ್ತಮ ಉದಾಹರಣೆಯಾಗಿದೆ. ಇಲ್ಲಿ ವಿಶೇಷ ಶಿವಲಿಂಗವಿದೆ. ಭಾರತದ ವಾಸ್ತು ಶಿಲ್ಪದ ಕಲೆ ಹಾಗೂ ವೈವಿಧ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ.

2,500 ವರ್ಷದಷ್ಟು ಹಳೆಯದಾದ ಅಚಲೇಶ್ವರ ಮಹಾದೇವ ದೇವಾಲಯವು ಶಿವನಿಗೆ ಸಮರ್ಪಿತವಾಗಿದೆ. ಚಂಬಲ್ ನದಿಯ ದಡದಲ್ಲಿರುವ ಈ ದೇವಾಲಯದಲ್ಲಿ ವಿಶೇಷವಾದ ಶಿವಲಿಂಗವಿದ್ದು, ಈ ಲಿಂಗ ಅಚ್ಚರಿಯಿಂದ ಕೂಡಿದೆ. ಇಲ್ಲಿರುವ ಶಿವಲಿಂಗ ದಿನಕ್ಕೆ ಮೂರು ಬಾರಿ ಬಣ್ಣ ಬದಲಾಯಿಸುತ್ತದೆ. ಅದಕ್ಕೆ ಕಾರಣ ಈ ಲಿಂಗದಲ್ಲಿರುವ ವಿಶೇಷ ಶಕ್ತಿ ಎಂಬುದು ಸ್ಥಳೀಯರ ಅಭಿಪ್ರಾಯ.

ದಿನಕ್ಕೆ 3 ಬಾರಿ ಬಣ್ಣ ಬದಲಾಯಿಸುತ್ತೆ:

ಇಲ್ಲಿರುವ ಶಿವಲಿಂಗ ದಿನಕ್ಕೆ 3 ಬಾರಿ ತನ್ನ ಬಣ್ಣ ಬದಲಾಯಿಸುತ್ತದೆ. ಬೆಳಿಗ್ಗೆ ಕೆಂಪು ಬಣ್ಣದಿಂದ ಕಂಡರೆ, ಮಧ್ಯಾಹ್ನ ಕೇಸರಿ ಬಣ್ಣದಿಂದ ಕೂಡಿರುತ್ತದೆ. ಸಂಜೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ.  ಹೀಗೆ ಇಲ್ಲಿನ ಲಿಂಗವು ದಿನಕ್ಕೆ ಮೂರು ಬಾರಿ ಬಣ್ಣ ಬದಲಿಸುತ್ತದೆ. ಸ್ಥಳೀಯರ ಹಾಗೂ ಪುರಾಣ ಕಥೆಗಳ ಪ್ರಕಾರ, ಈ ಶಿವಲಿಂಗ ಅತೀವ ಶಕ್ತಿಯುಳ್ಳ ಶಿವಲಿಂಗವೆಂಬ ನಂಬಿಕೆ ಇದೆ.

108 ಕ್ಕೂ ಹೆಚ್ಚು ಶಿವನ ದೇವಾಲಯ: 

ಇಲ್ಲಿಗೆ ಸಮೀಪವಿರುವ ಮೌಂಟ್‌ ಅಬು ಎಂಬಲ್ಲಿ 108ಕ್ಕೂ ಹೆಚ್ಚು ಶಿವನ ದೇವಾಲಯಗಳಿವೆ. ಸ್ಕಂದ ಪುರಾಣದ ಉಲ್ಲೇಖದಂತೆ ವಾರಣಾಸಿ ಶಿವನ ನಗರವಾಗಿತ್ತು. ಆ ಸಮಯದಲ್ಲಿ ಮೌಂಟ್‌ ಅಬು ಉಪನಗರವಾಗಿತ್ತು ಎಂದು ಹೇಳಲಾಗುತ್ತದೆ. ಇಲ್ಲಿ ಶಿವ ಹೆಬ್ಬೆರಳುಗಳ ಗುರುತುಗಳಿದ್ದು, ಅಚಲಗಢ ಕೋಟೆಯ ಸಮೀಪ ಈ ದೇವಾಲಯಗಳಿವೆ. ಶ್ರಾವಣ ಹಾಗೂ ಶಿವರಾತ್ರಿಯಲ್ಲಿ ಇಲ್ಲಿನ ದೇವಾಲಯಗಳಿಗೆ ಅಪಾರ ಸಂಖ್ಯೆಯಲ್ಲಿ ಭಕ್ತರ ಬರುತ್ತಾರೆ. 

ಇದರ ಹಿಂದಿನ ರಹಸ್ಯವೇನು? 

ಈಗಾಗಲೇ ವಿಜ್ಞಾನಿಗಳು ಈ ಶಿವಲಿಂಗದ ಹಿಂದಿನ ರಹಸ್ಯವನ್ನು ಪತ್ತೆ ಮಾಡಲು ಸಾಕಷ್ಟು ಪ್ರಯತ್ನಗಳನ್ನು ನಡೆಸಿದ್ದಾರೆ. ಆದರೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಶಿವಲಿಂಗ ಬಣ್ಣ ಬದಲಿಸುವ ಹಿಂದಿನ ರಹಸ್ಯವೇನು ಎಂಬುದರ ಕುರಿತು ಸಾಕಷ್ಟು ಭಿನ್ನಾಭಿಪ್ರಾಯಗಳಿವೆ.

ಬಣ್ಣ ಬದಲಿಸುವ ಇತರೆ ಲಿಂಗಗಳು ಎಲ್ಲಿವೆ : 

  • ತಮಿಳುನಾಡಿನಲ್ಲಿರುವ ಶ್ರೀ ಕಲ್ಯಾಣ ಸುಂದರೇಶ್ವರ ದೇವಸ್ಥಾನದಲ್ಲಿ ಒಂದು ಶಿವಲಿಂಗವಿದೆ. ಈ ಶಿವಲಿಂಗ ದಿನಕ್ಕೆ 5 ಬಾರಿ ತನ್ನ ಬಣ್ಣ ಬದಲಾಯಿಸುತ್ತದೆ. 

  • ಕರ್ನಾಟಕದ ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿರು ವಿರೂಪಾಕ್ಷಿ ದೇವಾಲಯದಲ್ಲಿ ಬಣ್ಣ ಬದಲಿಸುವ ಶಿವಲಿಂಗವಿದೆ. ಅಲ್ಲದೇ ಉಡುಪಿಯ ಸಮೀಪದ ಕಾಂತೇಶ್ವರ ದೇವಾಲಯದಲ್ಲಿರುವ ಶಿವಲಿಂಗ ಕೂಡ ಬಣ್ಣ ಬದಲಾಯಿಸುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.