ADVERTISEMENT

ಇಂದು ಭರತ ಹುಣ್ಣಿಮೆ: ಇದರ ಮಹತ್ವ ತಿಳಿದುಕೊಳ್ಳಿ

ಎಲ್.ವಿವೇಕಾನಂದ ಆಚಾರ್ಯ
Published 1 ಫೆಬ್ರುವರಿ 2026, 5:14 IST
Last Updated 1 ಫೆಬ್ರುವರಿ 2026, 5:14 IST
<div class="paragraphs"><p>‘ಭಾರತ ಹುಣ್ಣಿಮೆ'</p></div>

‘ಭಾರತ ಹುಣ್ಣಿಮೆ'

   

ಚಿತ್ರ ಕೃಪೆ: 

‘ಭರತ ಹುಣ್ಣಿಮೆ’ಯನ್ನು ಫೆಬ್ರುವರಿ 1ರಂದು ಆಚರಿಸಲಾಗುತ್ತದೆ. ಮಾಘ ಮಾಸದ ಪೂರ್ಣಿಮೆಯನ್ನು ‘ಭರತ ಹುಣ್ಣಿಮೆ’ ಅಥವಾ ‘ಭಾರತ ಹುಣ್ಣಿಮೆ’ ಎಂತಲೂ ಕರೆಯಲಾಗುತ್ತದೆ. ಹಿಂದೂ ಪಂಚಾಗದ ಪ್ರಕಾರ ಈ ದಿನ ಮಂಗಳಕರವಾಗಿದೆ. ಭರತ ಹುಣ್ಣಿಮೆಯನ್ನು ಪ್ರಮುಖವಾಗಿ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಲ್ಲಿ ಕುಲದೇವತೆಗಳ ಪೂಜಾ ದಿನವಾಗಿ ಆಚರಣೆ ಮಾಡುತ್ತಾರೆ. 

ADVERTISEMENT

ಭರತ ಹುಣ್ಣಿಮೆಯನ್ನು ‘ವ್ಯಾಸ ಪೂರ್ಣಿಮೆ’ ಎಂತಲೂ ಕರೆಯಲಾಗುತ್ತದೆ. ಇಂದು ಸವದತ್ತಿ ಯಲ್ಲಮ್ಮ, ಮೈಲಾರ ಲಿಂಗೇಶ್ವರ, ಸೇರಿದಂತೆ ಇತರೆ ಜಾತ್ರೆ ಹಾಗೂ ಬ್ರಹ್ಮರಥೋತ್ಸವದ ಆಚರಣೆ ಮಾಡಲಾಗುತ್ತದೆ.

ಇಂದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ವಸ್ತುಗಳನ್ನು ಮನೆಗೆ ತಂದರೆ ಶುಭಫಲ ಪ್ರಾಪ್ತಿಯಾಗಿ ಕಷ್ಟಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.

ಅರಿಶಿನ, ಏಲಕ್ಕಿ, ಸಾಸಿವೆ ಹಾಗೂ ಡಮರುಗವನ್ನು ಇಂದು ಮನೆಗೆ ತರುವುದರಿಂದ ಜಾತಕ ದೋಷಗಳು ಪರಿಹಾರವಾಗಿ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ. 

ಈ ದಿನ ಅರಳಿ ಮರಕ್ಕೆ ಪೂಜಿಸಿ ಮೂರು ಪ್ರದಕ್ಷಿಣೆ ಹಾಕಿದರೆ,  ಸೌಭಾಗ್ಯ ದೊರೆಯುವುದಲ್ಲದೆ, ‌ಮಹಾಲಕ್ಷ್ಮೀಯ ಆಶೀರ್ವಾದ ದೊರೆಯುತ್ತದೆ. ಇಂದು ಮನೆಯಲ್ಲಿ ಡಮರುಗ ಇಟ್ಟು ಶಿವನ ಪೂಜಿಸುವುದರಿಂದ ಸಾಲದ ಸಮಸ್ಯೆ ದೂರವಾಗುತ್ತದೆ.

ಇಂದು ಪವಿತ್ರ ನದಿಗಳಲ್ಲಿ ಸ್ನಾನ ಮಾಡಿ ದೇವರ ಪೂಜೆ ಮಾಡುವುದರಿಂದ ನಮ್ಮ ಪಾಪಗಳು ಪರಿಹಾರವಾಗುತ್ತವೆ. ಇಂದು ಅನ್ನದಾನ ಅಥವಾ ವಸ್ತ್ರದಾನ ಮಡುವುದು ಹೆಚ್ಚಿನ ಲಾಭ ತಂದುಕೊಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.